ಜಿಲ್ಲೆ

ಗ್ರಂಥಾಲಯ ವಿಜ್ಞಾನ ತರಬೇತಿ

ಚಿತ್ರದುರ್ಗ:ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯನಾಲ್ಕು ಕಂದಾಯ ವಿಭಾಗಗಳಾದ ಬೆಂಗಳೂರು,ಮೈಸೂರು ವಿಭಾಗದ ಮಂಗಳೂರು,ಬೆಳಗಾವಿ ವಿಭಾಗದ ಧಾರವಾಡ ಮತ್ತು ಕಲಬುರುಗಿಯಲ್ಲಿ 6 ತಿಂಗಳ ಅವಧಿ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ ಗಳನ್ನು ನಡೆಸುತ್ತಿದೆ. ಇದರ ಪ್ರವೇಶಕ್ಕೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.40,ಎಸ್‌ಸಿ,ಎಸ್‌ಟಿಗೆ ಶೇ.35 ಅಂಕ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದೆ. ಇಲಾಖೆ ಡಿ ದರ್ಜೆ ಗ್ರಂಥಾಲಯ ಸಹವರ್ತಿಗಳು,ಇಲಾಖೆ ಉಪ ನಿರ್ದೇಶಕ ರು,ಮುಖ್ಯಗ್ರಂಥಾಲಯಾಧಿಕಾರಿಗಳ ಮುಖಾಂತರ ಹಾಗೂ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು ಸಂಬಂಧಿಸಿದ ಪಿಡಿಒ ಮುಖಾ ಂತರ ಮತ್ತು ಇತರ ಸಂಸ್ಥೆಗಳ ಅಭ್ಯರ್ಥಿಗಳು ತಮ್ಮ ಸಂಸ್ಥೆ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ರಾಜ್ಯಕೇಂದ್ರ ಗ್ರಂಥಾಲಯ,ಕಬ್ಬನ್‌ಉದ್ಯಾನ,ಉಪನಿರ್ದೇಶಕರ ಕಚೇರಿ(080-22212128) ಧಾರವಾಡ ನಗರ ಕೇಂದ್ರ ಗ್ರಂಥಾಲಯ,ಡಿಸಿ ಕಚೇರಿ ಆವರಣ ಉಪನಿರ್ದೇಶಕರ ಕಚೇರಿ(0836-2442465)ಗೆ ಸಂಪರ್ಕಿಸಬಹುದೆಂ ದು ನಗರ ಕೇಂದ್ರ ಮುಖ್ಯ ಗ್ರಂಥಾಲಯಾಧಿಕಾರಿ ಬಸವರಾಜಕೊಳ್ಳಿ ತಿಳಿಸಿದ್ದಾರೆ.