ಚಿಕ್ಕೋಡಿಯಲ್ಲಿ ನೂತನ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಕೊಲ್ಕೊತ್ತಾದ ರಾಜಾರಾಮ ಮೋಹನರಾಯ್ ಲೈಬ್ರರಿ ಫೌಂಡೇಷನ್ ವತಿಯಿಂದ 40 ಲಕ್ಷ ರೂ. ಅನುದಾನದ ಪ್ರತಿಯನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಗ್ರಂಥಪಾಲಕ ವಸಂತ ಚಿತ್ರಗಾರ ಅವರಿಗೆ ನೀಡಿದರು. ಜಗದೀಶ ಕವಟಗಿಮಠ, ಅಭಯ ಮಾನವಿ, ಅರುಣ ಕಾಶಿದಕರ, ಪ್ರಣವ ಮಾನವಿ ಇದ್ದರು. 
ಜಿಲ್ಲೆ

ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ

ಚಿಕ್ಕೋಡಿ, ಬೆಳಗಾವಿ: ಇಲ್ಲಿನ ನೂತನ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಕೊಲ್ಕೊತ್ತಾದ ರಾಜಾರಾಮ ಮೋಹನರಾಯ್ ಲೈಬ್ರರಿ ಫೌಂಡೇಷನ್ ವತಿಯಿಂದ 40 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಕಂತಿನಲ್ಲಿ 36 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.
ಬೆಳಗಾವಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಜಿ. ರಾಮಯ್ಯ ಮಾತನಾಡಿ, ಶೀಘ್ರ ಚಿಕ್ಕೋಡಿಯ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರಿಗೆ ಅನುದಾನವನ್ನು ಹಸ್ತಾಂತರಿಸಿ, ನೂತನ ಗ್ರಂಥಾಲಯ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಚಿಕ್ಕೋಡಿ ಪುರಸಭೆ ಸದಸ್ಯ ಜಗದೀಶ ಕವಟಗಿಮಠ, ಲೋಕೋಪಯೋಗಿ ಇಲಾಖೆಯ ಚಿಕ್ಕೋಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ವಿ.ಎನ್.ಪಾಟೀಲ, ನಿಪ್ಪಾಣಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಭಯ ಮಾನವಿ, ಬಿಜೆಪಿ ನಗರ ಅಧ್ಯಕ್ಷ ಪ್ರಣವ ಮಾನವಿ, ಕಾಶಿನಾಥ ಕಮತೆ, ಅರುಣ ಕಾಶಿದಕರ, ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ವಸಂತ ಚಿತ್ರಗಾರ ಇತರರಿದ್ದರು.