ಡಾ. ಎಚ್. ಲೋಕೇಶಪ್ಪ 
ಜಿಲ್ಲೆ

ಗ್ರಂಥಾಲಯ ಒಳಕೆಯಿಂದ ಭವಿಷ್ಯ ಉಜ್ವಲ

ಹೊಳೆಹೊನ್ನೂರು: ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆದು ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಿ ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ. ಎಚ್. ಲೋಕೇಶಪ್ಪ ತಿಳಿಸಿದರು.

ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ‘ಡಿಜಿಟಲ್ ಯುಗದಲ್ಲಿ ಗ್ರಂಥಾಲಯ: ಸಂಪ್ರದಾಯ ಮತ್ತು ತಂತ್ರಜ್ಞಾನದ ಬೆಸುಗೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನ ತುಂಬ ವೇಗವಾಗಿ ಬೆಳೆಯುತ್ತಿದೆ. ಅಂಗೈಯಲ್ಲಿ ವಿಶ್ವಕೋಶದಂತಿರುವ ಮೊಬೈಲ್ನಲ್ಲಿ ಜಗತ್ತಿನ ಎಲ್ಲ ಜ್ಞಾನಗಳು ದೊರೆಯುತ್ತಿವೆ. ಗ್ರಂಥಾಲಯ ಹಾಗೂ ಸಾಂಪ್ರದಾಯಕ ಗ್ರಂಥಾಲಯದ ಬಳಕೆಯಿಂದ ಬದುಕನ್ನು ರೂಪಿಸಿಕೊಳ್ಳಬಹುದು. ಗ್ರಂಥಾಲಯಗಳು ಮನುಷ್ಯನ ಹೃದಯದ ಆತ್ಮವಿದ್ದಂತೆ ಹೊಸ ಹೊಸ ಪುಸ್ತಕಗಳನ್ನು ಓದುವ ಮೂಲಕ ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬಹುದು ಎಂದರು.

ಆನವಟ್ಟಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಖಂಡೋಜಿ ಟಿ. ಲಮಾಣಿ, ಐಕ್ಯೂಎಸಿ ಸಂಚಾಲಕಿ ಡಾ. ಭಾರತಿ ದೇವಿ, ಗ್ರಂಥಪಾಲಕ ಡಾ. ಎಸ್.ರಾಜು ನಾಯ್ಕ, ಡಾ. ಎಸ್.ನಾಗರಾಜ್ ನಾಯ್ಕ, ಡಾ. ಸಂಗೀತ ಬಗಲಿ, ಕೆ.ದೀಪಾ ರುದ್ರಮುನಿ, ವಿಶ್ವನಾಥ್, ಉಮೇಶ್, ಜಯಪ್ಪ, ರಾಜಶೇಖರ್, ಮಂಜುಳಾ ಮತ್ತಿತರರಿದ್ದರು.