ಜಿಲ್ಲೆ

ಗ್ರಂಥಾಲಯ ಒಂದು ಜ್ಞಾನ ಭಂಡಾರ: ಡಾ.ವಿ.ಮಹೇಶ್

ಚನ್ನರಾಯಪಟ್ಟಣ: ಗ್ರಂಥಾಲಯ ಒಂದು ಅಪಾರ ಜ್ಞಾನ ಭಂಡಾರ ಎಂದು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಹೇಳಿದರು.


ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹೇಮವಾಣಿ ಪ್ರಕಾಶನ ಹಾಗೂ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಮಾಜದಲ್ಲಿ ಒಬ್ಬ ಉತ್ತಮ ನಾಗರೀಕನಾಗಬೇಕಾದರೆ ವಿದ್ಯೆ ಅತಿಮುಖ್ಯ. ವಿದ್ಯೆಯು ಶಾಲೆಗಳಲ್ಲಿ ಬಿಟ್ಟರೆ ಗ್ರಂಥಾಲಯಗಳಲ್ಲಿ ಮಾತ್ರ ಸಿಗುತ್ತದೆ ಆದ್ದರಿಂದ ಎಲ್ಲರೂ ಗ್ರಂಥಾಲಯಗಳಿಗೆ ಭೇಟಿ ನೀಡಿ ಜ್ಞಾನವಂತರಾಗಿ ಎಂದರು.


ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ಮಾತನಾಡಿ, ಗ್ರಂಥಾಲಯದ ಇತಿಹಾಸವನ್ನು ಓದುಗರಿಗೆ ತಿಳಿಸಿ ಸದ್ಯ ಇರುವ ಒಂದು ಅಂತಸ್ಥಿನ ಬಳಕೆಯಿಂದ ಸಾಕಷ್ಟು ಅನುಕೂಲವಾಗಿರುವುದನ್ನು ಸಾರ್ವಜನಿಕ ಅನಿಸಿಕೆಯಾಗಿದೆ. ಇರುವ ಸ್ಥಳಾವಕಾಶ ಓದುಗರಿಗೆ ಕೊರತೆ ಇದ್ದು ಎರಡನೇ ಅಂತಸ್ಥಿನ ಕಟ್ಟಡ ನಿರ್ಮಾಣವಾಗಿದ್ದು ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದರು.


ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎಂ.ಜಯರಾಂ, ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ್, ಗೋವಿಂದರಾಜ್, ಜಗದೀಶ್, ಬರಾಳ್‌ಶಿವರಾಂ, ಗ್ರಂಥಪಾಲಕರಾದ ದೇವರಾಜ್, ಲಕ್ಷ್ಮಿ ಹಾಗೂ ಇತರರು ಇದ್ದರು.