ಜಿಲ್ಲೆ

ಗ್ಯಾರಂಟಿಗಳಿ0ದ ನೀರಾವರಿಗೆ ಅನುದಾನ ಕೊರತೆ

ಬಾಗಲಕೋಟೆ: ಚುನಾವಣೆ ಪೂರ್ವದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ ೨ ಲಕ್ಷ ಕೋಟಿ ರೂ.ಗಳನ್ನು ಒದಗಿಸುವ ಕಾಂಗ್ರೆಸ್ ಪಕ್ಷದ ಭರವಸೆಯನ್ನು ಸರ್ಕಾರ ಹುಸಿಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ವಿಪಕ್ಷದವರು ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹ ಗ್ಯಾರಂಟಿಗಳಿAದ ನೀರಾವರಿಗೆ ನಿಗದಿತ ಅನುದಾನ ಕೊಡಲು ಆಗಿಲ್ಲ ಎಂದು ಸತ್ಯ ಒಪ್ಪಿಕೊಂಡಿದ್ದಾರೆ.

ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಬುಧವಾರ ಜಮಖಂಡಿ ಅರ್ಬನ್ ಬ್ಯಾಂಕ್ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ನಮ್ಮ ಪ್ರನಾಳಿಕೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ ೨ ಲಕ್ಷ ಕೋಟಿ ರೂ. ಅನುದಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದೇವು. ಅದರಂತೆ ಪ್ರತಿ ಬಜೆಟ್‌ನಲ್ಲಿ ೪೦ ಸಾವಿರ ಕೋಟಿ ರೂ. ಇಡಬೇಕಾಗಿತ್ತು. ಆದರೆ, ಗ್ಯಾರಂಟಿಗಳಿAದಾಗಿ ಅಷ್ಟು ಅನುದಾನ ಕೊಡಲು ಆಗಿಲ್ಲ. ಈ ಬಜೆಟ್‌ನಲ್ಲಿ ೨೨ ಸಾವಿರ ಕೋಟಿ ರೂ. ನಿಗದಿ ಪಡಿಸಲಾಗಿದೆ. ಆಲಮಟ್ಟಿ ಜಲಾಶಯವನ್ನು ೫೨೪ ಮೀಟರ್ ಗೆ ಎತ್ತರಿಸಲು ಏನೆಲ್ಲ ಮಾಡಬೇಕು? ಯಾವ ಕಾರ್ಯಕ್ರಮ ರೂಪಿಸಬೇಕು ಎನ್ನುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಡಿದರು.

ನಿಂಬೆ ಹುಳಿ ಶ್ರೇಷ್ಠ

ಜಮಖಂಡಿಗೆ ಆಗಮಿಸಿದ ಡಿ.ಕೆ.ಶಿವಕುಮಾರ ಅವರಿಗೆ ಯಾರೋ ಒಬ್ಬರು ನಿಂಬೆ ಹಣ್ಣು ಕೊಟ್ಟಿದ್ದನ್ನು ಉಲ್ಲೇಖಿಸಿದ ಅವರು, ಎಲ್ಲ ಹುಳಿಗಳಲ್ಲಿ ನಿಂಬೆ ಹುಳಿ ಶ್ರೇಷ್ಠವಾಗಿದೆ. ಸರ್ವಜ್ಞ ಹೇಳಿದಂತೆ ದುಂಬಿಗಿAತ ಶ್ರೇಷ್ಠವಿಲ್ಲ, ಶಂಭುಗಿAತ ದೇವರಿಲ್ಲ, ನಂಬಿಕೆಗಿAತ ದೊಡ್ಡ ಗುಣವಿಲ್ಲ ಎಂದಿದ್ದಾರೆ. ಆ ನಂಬಿಕೆಯಿAದಲೇ ಒಂದು ವರ್ಷ ಕಾಯ್ದು ನನ್ನ ಕೈಯಿಂದಲೇ ಅರ್ಬನ್ ಬ್ಯಾಂಕ್ ಕಟ್ಟಡವನ್ನು ನನ್ನ ಕೈಯಿಂದಲೇ ಮಾಡಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.