ಚಿತ್ರದುರ್ಗ: ಗ್ಯಾರಂಟಿಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕೆಂದು,ಅರ್ಹರು ಇವುಗಳ ಪ್ರಯೋಜನದಿಂದ ವಂಚಿತರಾಗಬಾರದು ಎಂದು ರಾಜ್ಯಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಹಾಗೂ ತಾಲೂಕುಗಳ ಗ್ಯಾರಂಟಿ ಅನುಷ್ಠಾನ ಪದಾಧಿಕಾರಿಗಳ ಸಭೆ,ಜಿಲ್ಲಾ ಕುಶಲ ಕರ್ಮಿಗಳ ವಿಭಾಗದ ಪದಾಧಿಕಾರಿಗಳ ಸನ್ಮಾನ ಸಮಾರಂಭ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಈ ನಾಡಿನ ಜನರಿಗೆ ಒಂದಲ್ಲ ಒಂದು ಗ್ಯಾರಂಟಿ ಲಾಭ ಸಿಗಬೇಕು, ಈ ನಿಟ್ಟಿನಲ್ಲಿ ಪಕ್ಷದ ಕಾರ‌್ಯಕರ್ತರು ಶ್ರಮಿಸಬೇಕು
ಗ್ಯಾರಂಟಿಗಳು ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವಂತಹ ಯೋಜನೆಗಳಾಗಿವೆ. ನಮ್ಮ ವಿರೋಧಿಗಳು ಈ ಯೋಜನೆಗಳ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯದಿವಾಳಿಯಾಗುತ್ತ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಪ್ರತಿಪಕ್ಷಗಳ ಆರೋಪಕ್ಕೆ ನಮ್ಮ ಕಾರ‌್ಯ ಕರ್ತರು ತಕ್ಕ ಉತ್ತರ ಕೊಡಬೇಕು. ಯಾವುದೇ ಕಾರಣಕ್ಕೂ ಈ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲವೆಂದರು.
ಗ್ಯಾರಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ,ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ಅಧ್ಯಕ್ಷರಾದ ಪ್ರಸನ್ನಕುಮಾರ್ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಜಿ.ಪಂ.ಮಾಜಿ ಅಧ್ಯಕ್ಷೆ ಶಶಿಕಲಾಸುರೇಶ್‌ಬಾಬು,ಮೈಲಾರಪ್ಪ,ಮೋಕ್ಷಾರುದ್ರಸ್ವಾಮಿ,ಕಿರಣ್,ಪ್ರಕಾಶ್, ನಜ್ಮತಾಜ್, ಲೋಕೇಶ್,ತಿಪ್ಪಮ್ಮ,ಶಿವಕುಮಾರ್ ಮತ್ತಿತರರು ಇದ್ದರು.