ಜಿಲ್ಲೆ

ಗ್ಯಾರಂಟಿ ಯೋಜನೆಗಳು ಮುಂದುವರಿಕೆ

ಕವಿತಾಳ: ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಮ್ಮ ಅವಧಿಯದ್ದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸುಳ್ಳು ಹೇಳುತ್ತಿದ್ದಾರೆ. ಈಗ ಚಾಲನೆ ನೀಡುತ್ತಿರುವ ಕಾಮಗಾರಿಗಳು ಕಾಂಗ್ರೆಸ್ ಸರ್ಕಾರದ ಅವಧಿಯದ್ದು ಎಂದು ಮಸ್ಕಿ ಶಾಸಕ ಆರ್ ಬಸನಗೌಡ ತುರ್ವಿಹಾಳ ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಹಿರೇಕಡಬೂರು, ಶಂಕರನಗರ ಕ್ಯಾಂಪ್, ತುಗ್ಗಲದಿನ್ನಿಯಲ್ಲಿ ತಲಾ 30 ಲಕ್ಷ ರೂ. ಹಂಚಿನಾಳ ಕ್ಯಾಂಪಿನಲ್ಲಿ 25 ಲಕ್ಷ ರೂ. ಹಾಲಾಪುರದಲ್ಲಿ 33 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ಕೆಲವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವ ತನಕ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದರು. ಪ್ರಮುಖರಾದ ಬಲವಂತರಾಯಗೌಡ ವಟಗಲ್, ಕರಿಯಪ್ಪ, ಬಸನಗೌಡ, ಬಸಪ್ಪ, ನಿರುಪಾದೆಪ್ಪ ವಕೀಲ, ಲಚುಮಣ್ಣ, ದೇವಪ್ಪ ಹಿರೇಮನಿ, ಮೌನೇಶ ತುಗ್ಗಲದಿನ್ನಿ ಉಪಸ್ಥಿತರಿದ್ದರು.