ಚಿಕ್ಕಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮಹೋತ್ಸವಕ್ಕೆ ಕೊನೇ ಕ್ಷಣದಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗೌರಿ ಗಣೇಶನ ಮೂರ್ತಿ ಮಾರಾಟ ಕಳೆಗಟ್ಟಿದೆ.
ಜಿಲ್ಲಾ ಕೇಂದ್ರದ ಬಿ.ಬಿ.ರಸ್ತೆಯಲ್ಲಿನ ಬೆಸ್ಕಾಂ ಕಚೇರಿ, ಪೆಟ್ರೋಲ್ ಬಂಕ್ ಮುಂಭಾಗ, ಗಂಗಮ್ಮನಗುಡಿ ರಸ್ತೆ ಸೇರಿ ವಿವಿಧೆಡೆ ಮೂರ್ತಿಗಳ ಮಾರಾಟ ನಡೆಯುತ್ತಿದ್ದು, ಬಹುತೇಕ 1ರಿಂದ 4 ಅಡಿಯೊಳಗಿನ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದ್ದು, ಕನಿಷ್ಠ 150 ರಿಂದ 3ಸಾವಿರ ರೂ.ಗಳಿಗೆ ವಹಿವಾಟು ನಡೆಯುತ್ತಿದೆ, ಕೊನೇ ಕ್ಷಣದಲ್ಲಿನ ವ್ಯಾಪಾರ, ಕಡಿಮೆ ಎತ್ತರದ ಮೂರ್ತಿಗಳ ಮಾರಾಟದ ನಿಯಮ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದ ತಯಾರಕರ ಆಸೆಗೆ ತಣ್ಣೀರೆರಚಿದೆ.
ಹಬ್ಬಕ್ಕೆ ಇನ್ನೇನು ಎರಡೇ ದಿನ ಬಾಕಿ ಇರುವುದರಿಂದ ಬಂದಷ್ಟು ಬರಲಿ ಹಾಗೂ ಚೌಕಾಸಿ ವ್ಯಾಪಾರ ಮಾರಾಟಗಾರರಲ್ಲಿ ಉತ್ಸಾಹವೇ ಇಲ್ಲವಾಗಿಸಿದೆ, ಮತ್ತೊಂದೆಡೆ ಒಂದು ವಾರ್ಡ್‌ಗೆ ಇಲ್ಲವೇ ಒಂದು ಗ್ರಾಮದಲ್ಲಿ ಒಂದು ಕಡೆ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇರುವುದರಿಂದ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಸಮಿತಿ, ಗೆಳೆಯರ ಬಳಗ, ಸಂಘ ಸಂಸ್ಥೆಗಳು ಆಕರ್ಷಕ ಮೂರ್ತಿಗಳ ಖರೀದಿಗೆ ಮುಂದಾಗುತ್ತಿಲ್ಲ. ಮುಂಗಡ ಹಣ ಪಾವತಿಸಿ, ಬುಕ್ ಮಾಡುವುದು ಇಲ್ಲದೇ ನೇರ ವ್ಯಾಪಾರದ ದೃಶ್ಯ ಕಂಡು ಬರುತ್ತಿದೆ.
ಮಾರಕ ಮೂರ್ತಿಗಳಿಗೆ ಬ್ರೇಕ್ : ಪರಿಸರ ಮಾಲಿನ್ಯಕ್ಕೆ ಕಾರಣವಾಗಲಿರುವ ಪ್ಲಾಸ್ಟರ್ ಆ್ ಪ್ಯಾರೀಸ್ (ಪಿಒಪಿ) ಮೂರ್ತಿಗಳ ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜಲ ಮಾಲಿನ್ಯ ತಡೆ ಕಾಯ್ದೆ 1974ರ ಪ್ರಕಾರ ್ಲಾಸ್ಟರ್ ಆ್ ಪ್ಯಾರೀಸ್, ಬಣ್ಣ ಲೇಪಿತ ವಿಗ್ರಹಗಳನ್ನು ಜಲ ಮೂಲಗಳಾದ ಕೆರೆ, ಕುಂಟೆ, ಕಾಲುವೆ, ಬಾವಿಗಳಲ್ಲಿ ವಿಸರ್ಜಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲೂ ಪಿಒಪಿ ಮೂರ್ತಿಗಳು ಕಾಣಿಸುತ್ತಿಲ್ಲ.