ಜಿಲ್ಲೆ

ಗೌರವಧನ ೧೦ ಸಾವಿರ ರೂ. ನೀಡಿ

ಕಲಬುರಗಿ: ಆಶಾ ಕಾರ್ಯಕರ್ತೆಯರ ಗೌರವಧನ ೧೦ ಸಾವಿರ ರೂ. ನಿಗದಿಪಡಿಸಿ ಏ.೧ರಿಂದ ಅನ್ವಯಿಸುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಹೋರಾಟ ನಡೆದಿದ್ದು, ಈ ವೇಳೆ ಸಂಘದ ಪದಾಧಿಕಾರಿಗಳ ಜತೆ ಸರ್ಕಾರ ಸಭೆ ನಡೆಸಿ ಪ್ರೋತ್ಸಾಹಧನ ೧೦ ಸಾವಿರ ರೂ., ಕಾಂಪೋನೆAಟ್ಸ್ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್, ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಲ್ಲಿ ವ್ಯತ್ಯಾಸದ ಹಣ ಪಾವತಿಸಿ ೧೦ ಸಾವಿರ ರೂ. ಗ್ಯಾರಂಟಿ ನೀಡಲು ತೀರ್ಮಾನಿಸಲಾಗಿತ್ತು ಎಂದು ಹೇಳಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿ.ಜಿ.ದೇಸಾಯಿ, ಜಿಲ್ಲಾಧ್ಯಕ್ಷ ಶಿವಲಿಂಗಮ್ಮ ನಂದೂರ, ಕಾರ್ಯದರ್ಶಿ ಗೀತಾ ಮಳ್ಳಿ ಇತರರಿದ್ದರು. ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.