filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5210185, 0.16820835);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ಗೌರವಧನ ಹೆಚ್ಚಳ ಕುರಿತು ಆದೇಶ ನೀಡಿ

ಚಾಮರಾಜನಗರ: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಸೇರಿದಂತೆ ಮಾಸಿಕ ಕನಿಷ್ಠ 1000 ರೂ, ಹೆಚ್ಚಳದ ಕುರಿತು ಸರ್ಕಾರ ಅಧಿಕೃತ ಆದೇಶವನ್ನು ನೀಡಬೇಕು ಎಂದು ಆಶಾ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಕವಿತಾ ಆಗ್ರಹಿಸಿದರು.

ರಾಜ್ಯದ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡುವಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಜ.7 ರಿಂದ 10 ರವರೆಗೆ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ ತಿಂಗಳಿಂದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಪ್ರೋತ್ಸಾಹ ಧನ ಸೇರಿಸಿ 10,000 ರೂ, ಗೌರವಧನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೇ 2 ತಿಂಗಳ ಕಳೆದರೂ ಈ ವರೆಗೂ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಆಗಾಗಿ ಗೌರವಧನ ಹೆಚ್ಚಳ ಕುರಿತು ಆಶಾ ಕಾರ್ಯಕರ್ತರಿಗೆ ಇಲಾಖೆ ವತಿಯಿಂದ ಅಧಿಕೃತ ಮಾಹಿತಿ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಏಪ್ರಿಲ್ ತಿಂಗಳಿಂದ ಎಲ್ಲಾ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ಸೇರಿಸಿ 10,000 ರೂ, ಗೌರವಧನ ಹೆಚ್ಚಳ ಮಾಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಳ ಮಾಡಿರುವ ತಂಡ ಆಧಾರಿತ 1000 ರೂ, ಹಣವನ್ನು ಎಲ್ಲಾ 42,000 ಆಶಾ ಕಾರ್ಯಕರ್ತರಿಗೆ ನೀಡಬೇಕು. ಈ ಕುರಿತು ಕೂಡಲೇ ಸರ್ಕಾರ ಎಲ್ಲಾ ಆಶಾಗಳಿಗೆ ಅಧಿಕೃತ ಆದೇಶವನ್ನು ಹೊರಡಿಸಬೇಕು ಎಂದು ಹೇಳಿದರು.

ಸಂಘದ ರಾಜ್ಯ ಉಪಾಧ್ಯಕ್ಷೆ ಉಮಾದೇವಿ ಮಾತನಾಡಿ, ರಾಜ್ಯ ಸರ್ಕಾರ ನೀಡುವ 5000 ರೂ, ಗೌರವಧನದೊಂದಿಗೆ, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನವನ್ನು ಒಳಗೊಂಡಂತೆ 10,000 ರೂ, ಕೊಡಬೇಕು ಎಂದು ಸೂಚನೆ ನೀಡಿದ್ದರು. ಅಧಿಕೃತವಾದ ಆದೇಶ ಪತ್ರವನ್ನು ಕೊಡುತ್ತಿಲ್ಲ. ಅಧಿಕಾರಿಗಳು ಬೇಜವಾಬ್ದಾರಿ ಉತ್ತರಗಳನ್ನು ನೀಡುತ್ತಿದ್ದಾರೆ. ಬಜೆಟ್‌ನಲ್ಲಿ 1000 ರೂ, ಹೆಚ್ಚಳ ಮಾಡಿರುವುದು ಎಲ್ಲಾ ಆಶಗಳಿಗೂ ಅನ್ವಯಿಸುವಂತೆ ನೋಡಿಕೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಚೆನ್ನಾಜಮ್ಮ, ಉಪಾಧ್ಯಕ್ಷೆ ಜಯಲಕ್ಷ್ಮಿ, ಸುವರ್ಣ, ಶಶಿಕಲಾ, ಭಾಗ್ಯ, ಅಶ್ವಿನಿ ಹಾಜರಿದ್ದರು.

ಸುಗಮಕಾರರ ಬಿಡುಗಡೆ:

ಸುಮಾರು 12 ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿರುವ ಆಶಾ ಸುಗಮಕಾರರನ್ನು ಸರ್ಕಾರ ಏಕಾಏಕಿ ಬಿಡುಗಡೆಗೊಳಿಸಿರುವುದು ಅನ್ಯಾಯವಾಗಿದ್ದು, ಇದರಿಂದ ಆಶಾ ಸುಗಮಕಾರರು ಗೊಂದಲಕ್ಕೆ ಸಿಲುಕಿದ್ದಾರೆ ಎಂದು ಜಿಲ್ಲಾಧ್ಯಕ್ಷೆ ಕವಿತಾ ಖಂಡಿಸಿದರು. ರಾಜ್ಯ ಸರ್ಕಾರ 60 ವರ್ಷ ತುಂಬಿರುವವರನ್ನು ಆಶಾ ಕಾರ್ಯಕರ್ತರ ಕೆಲಸದಿಂದ ಬಿಡುಗಡೆಗೊಳಿಸುತ್ತಿದ್ದು ಅತ್ಯಂತ ಅಮಾನವೀಯವಾಗಿದೆ. ವಿವಿಧ ರಾಜ್ಯಗಳಲ್ಲಿ ಈ ಸೇವೆಯ ವಯಸ್ಸು 62 ಇದ್ದು. ರಾಜ್ಯದಲ್ಲೂ ಇದನ್ನು ಮುಂದುವರಿಸಬೇಕು ಎಂದರು.