ಬಾಳೆಹೊನ್ನೂರು: ಮಾತಾ ಪಿತೃಗಳಿಗೆ ಹೇಗೆ ಗೌರವ ನೀಡಬೇಕು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದು ಶ್ರೀ ಮಹಾಗಣಪತಿ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಪೀಠಾಧಿಪತಿ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಹಲಸೂರು ಗ್ರಾಮದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 25ನೇ ವರ್ಷದ ಗಣೇಶೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿಂದು ಸಂಸ್ಕೃತಿಯನ್ನು ಹಾಗೂ ವೇದ, ಉಪನಿಷತ್ತುಗಳನ್ನು ಋಷಿ ಮುನಿಗಳು ನೀಡಿದ್ದು, ಅದರ ಸಂರಕ್ಷಣೆ ಹಾಗೂ ಅರಿವು ಮೂಡಿಸುವಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸಿದೆ. ಹೆತ್ತ ತಾಯಿಯನ್ನು ಗೌರವದಿಂದ ಕಾಣಬೇಕು ಎಂಬುದನ್ನು ಗಣೇಶನು ತಿಳಿಸಿಕೊಟ್ಟಿದ್ದಾನೆ ಎಂದರು.
ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಹಿಂದು ಸಂಸ್ಕೃತಿ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಕೆಲವು ಕಿಡಿಗೇಡಿಗಳು ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ತರುವಂತೆ ಮಾಡುತ್ತಿದ್ದಾರೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಬೇಕು ಎಂದರು.
ಕಾಫಿ ಬೆಳೆಗಾರ ಟಿ.ಎಂ.ನಾಗೇಶ್ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿಯೂ ಗಣಪತಿ ಸೇವಾ ಸಮಿತಿ ಸದಸ್ಯರು ಶಿಸ್ತಿನಿಂದ ಸಮವಸ್ತ್ರ ಧರಿಸಿ ಅದ್ದೂರಿಯಾಗಿ ಗಣೇಶೋತ್ಸವ ನಡೆಸಿರುವುದು ಮಾದರಿಯಾಗಿದೆ ಎಂದರು.
ಗಣಪತಿ ಸಮಿತಿ ಅಧ್ಯಕ್ಷ ಕೆ.ವಿ.ಗೋಪಾಲ, ಕಾರ್ಯದರ್ಶಿ ಧರ್ಮಾಧರ, ಪ್ರದೀಪ್, ಮುಖಂಡರಾದ ಕೆ.ಟಿ.ನಾರಾಯಣ, ಶಿವಲಿಂಗೇಗೌಡ, ಪವಿತ್ರಾ, ಕೆ.ಎಂ.ರತೀಶ್, ಮುಖ್ಯಶಿಕ್ಷಕ ರಾಜು, ಪ್ರಮುಖರಾದ ಕೆ.ಆರ್.ದೀಪಕ್, ಕೆ.ಎನ್.ರುದ್ರಪ್ಪ ಗೌಡ, ಜಿ.ಕೆ.ಚಿನ್ನೇಗೌಡ, ಎಚ್.ಟಿ.ಮಂಜಪ್ಪ, ದೇವಯ್ಯ, ನೀಲಮ್ಮ, ಎಚ್.ಎಂ.ರವೀಶ್, ಕಮಲಮ್ಮ, ದೇವರಾಜ್, ನಾಗಯ್ಯ, ಸುಶೀಲಾ ಇತರರಿದ್ದರು.