ಯಳಂದೂರು ಸಮೀಪದ ಬಸವಟ್ಟಿ ಗ್ರಾಮದ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದರವನ್ನು ಪೊಲೀಸರು ಬಂಧಿಸಿರುವುದು. 
ಜಿಲ್ಲೆ

ಗೋವು, ಎಮ್ಮೆ ಸಾಗಿಸುತ್ತಿದ್ದವರ ಬಂಧನ

ಸಂತೇಮರಹಳ್ಳಿ ಪೊಲೀಸರ ದಾಳಿ


ಯಳಂದೂರು: ಸಮೀಪದ ಬಸವಟ್ಟಿ ಗೇಟ್ ಹಾಗೂ ಹುಲ್ಲೇಪುರ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವು ಹಾಗೂ ಎಮ್ಮೆಗಳನ್ನು ಸಂತೇಮರಹಳ್ಳಿ ಪೊಲೀಸರು ಶನಿವಾರ ರಕ್ಷಿಸಿದ್ದಾರೆ.


ಖಚಿತ ಮಾಹಿತಿ ಮೇರೆಗೆ ಸಿಪಿಐ ಬಿ.ಮಹೇಶ್, ಪಿಎಸ್‌ಐ ತಾಜುದ್ದೀನ್ ನೇತೃತ್ವದಲ್ಲಿ ಸಿಬ್ಬಂದಿ ರಮೇಶ್, ಮಾದೇಶ್, ಮಹೇಶ್, ಪ್ರತಾಪ್ ಪೊಲೀಸರ ತಂಡ ಪ್ರತ್ಯೇಕವಾಗಿ ದಾಳಿ ನಡೆಸಿದೆ. ಸಮೀಪದ ಬಸವಟ್ಟಿ ಗೇಟ್ ಬಳಿಯಿಂದ 2 ಹಸುಗಳನ್ನು ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದ ಮಹೇಶ್ ಹಾಗೂ ರಾಚಯ್ಯ ಎಂಬುವರನ್ನು ಬಂಧಿಸಲಾಗಿದೆ.


ಮತ್ತೊಂದು ಪ್ರಕರಣದಲ್ಲಿ ಹುಲ್ಲೇಪುರ ಕ್ರಾಸ್ ಬಳಿ ಗೂಡ್ಸ್ ಆಟೋದಲ್ಲಿ 2 ಎಮ್ಮೆಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು, ಮಹೇಶ್ ಹಾಗೂ ಶ್ರೀಕಂಠಸ್ವಾಮಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.