ಹುಬ್ಬಳ್ಳಿ: ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯ ಹುಬ್ಬಳ್ಳಿ ಶಾಖೆಯ ಅಧಿಕಾರಿಗಳು ಗೋವಾದಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ ನಕಲಿ ಐಎಸ್ಐ ಮಾರ್ಕ್ ಹೊಂದಿದ್ದ ಸ್ಟೇನ್ಲೆಸ್ ಸ್ಟೀಲ್ ವೆಲ್ಡೆಡ್ ಪೈಪ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಶಾಖೆಯ ನಿರ್ದೇಶಕ ಡಿ.ಪಿ. ಕುಮಾರ ನಿರ್ದೇಶನದ ಮೇರೆಗೆ ಸಹಾಯಕ ನಿರ್ದೇಶಕರಾದ ಸೌವಿಕ್ ಸಿಕ್ದರ್ ಹಾಗೂ ಆಶುತೋಷ ಅಗರ್ವಾಲ್ ಗೋವಾದ ಬರ್ದೆಜ್ನಲ್ಲಿಯ ಮೆ. ವಿಯಾನ್ ಮೆಟಲ್ ಆಂಡ್ ಅಲೋಯ್್ಸ ಮಳಿಗೆ ಮೇಲೆ ಕಾರ್ಯಾಚರಣೆ ನಡೆಸಿದರು.
ನಕಲಿ ಐಎಸ್ಐ ಮಾರ್ಕ್ ಹೊಂದಿದ ಉತ್ಪನ್ನಗಳನ್ನು ಮಾರಾಟ ಮಾಡುವುದು ಬಿಐಎಸ್ ಕಾಯ್ದೆ 2016ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಮಳಿಗೆಯ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.