ಕಣಕುಂಬಿ ಬಳಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. ಮಂಜುನಾಥ ಗಲಗಲಿ, ಎಸ್.ಎಂ. ಪೂಜಾರ, ಸುನೀಲ ಪಾಟೀಲ ಬಿ.ಎಸ್. ಅಟಿಗಲ್, ಎ.ಡಿ. ಜಾಧವ, ಎ.ಐ. ಸಯ್ಯದ್ ಇತರರಿದ್ದರು. 
ಜಿಲ್ಲೆ

ಗೋವಾ ಮದ್ಯ ಜಪ್ತಿ, ಇಬ್ಬರ ಬಂಧನ

ಬೆಳಗಾವಿ: ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವಾಹನ ಜಪ್ತಿ ಮಾಡಿರುವ ಅಬಕಾರಿ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿ, 2 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ಶಿವಾಜಿ ಬಾಳು ದೈಂಜೆ (49) ಹಾಗೂ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಳಲಪುಡಿ ಗ್ರಾಮದ ನಿವಾಸಿ ವೀರವಸಂತರಾವ್ (41) ಎಂಬುವರನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ಕ್ಯಾಂಟರ್ ವಾಹನ ಹಾಗೂ 1,007 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ.

ಗುರುವಾರ ಬೆಳಗ್ಗೆ ಗೋವಾ-ಖಾನಾಪುರ ರಸ್ತೆ ಮಾರ್ಗದ ಕಣಕುಂಬಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕ್ಯಾಂಟರ್ ವಾಹನದೊಳಗೆ ವಿನ್ಯಾಸ ಮಾಡಿರುವುದು ಕಂಡು ಬಂತು. ಅನುಮಾನಗೊಂಡ ಸಿಬ್ಬಂದಿ ಪರಿಶೀಲಿಸಿದಾಗ, ಗೋವಾದ ವಿವಿಧ ಕಂಪನಿಯ ಮದ್ಯ ಹಾಗೂ 7 ಲಕ್ಷ ರೂ. ಮೌಲ್ಯದ ಕ್ಯಾಂಟರ್ ವಾಹನವನ್ನೂ ಜಪ್ತಿ ಮಾಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಮಂಜುನಾಥ ಗಲಗಲಿ, ಎಸ್.ಎಂ. ಪೂಜಾರ, ಸಿಬ್ಬಂದಿ ಸುನೀಲ ಪಾಟೀಲ ಬಿ.ಎಸ್. ಅಟಿಗಲ್, ಎ.ಡಿ. ಜಾಧವ, ಎ.ಐ. ಸಯ್ಯದ್ ಇತರರು ಪಾಲ್ಗೊಂಡಿದ್ದರು.