ಜಿಲ್ಲೆ

ಗೋವಾ ಮದ್ಯ ಅಕ್ರಮ ಸಾಗಾಟ, ಅಬಕಾರಿ ದಾಳಿಯಲ್ಲಿ ಸಿಕ್ಕಿದ್ದೆಷ್ಟು ಗೊತ್ತಾ?

Vijyapura - Parsuram Bhasagi

ವಿಜಯಪುರ: ಕರ್ನಾಟಕ- ಮಹಾರಾಷ್ಟ್ರದ ಗಡಿಭಾಗದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ನಿಟ್ಟಿನಲ್ಲಿ ಚುರುಕಿನ ಕಾರ್ಯಾಚರಣೆಗೆ ಇಳಿದಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಲಕ್ಷಾಂತರ ರೂ.ಮೌಲ್ಯದ ಮದ್ಯ ವಶಕ್ಕೆ ಪಡೆದಿದೆ‌.

ಇಲ್ಲಿನ ಅಲಿಯಾಬಾದ್ ಗ್ರಾಮದ ಬಳಿ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.80 ಮೌಲ್ಯದ ಸುಮಾರು 10 ಪೆಟ್ಟಿಗೆ ಮದ್ಯ ವಶಕ್ಕೆ ಪಡೆದಿದ್ದಾರೆ.

ಕೃಷ್ಣಾ ರಘುನಾಥ ಕರಪೆ ಹಾಗೂ ಬೀರು ರಾಘು ಮಾನವರ ಬಂಧಿತ ಆರೋಪಿಗಳು.

ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಿರೋಜಖಾನ್ ಕಿಲ್ಲೇದಾರ ಹಾಗೂ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಹಾಗೂ ಅಬರಕಾರಿ ಉಪ ಅಧೀಕ್ಷಕ ಎಲ್.ಎಸ್‌. ಅಲಗರೆ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.

ಪೇದೆಗಳಾದ ಭೀಮಣ್ಣ ಕುಂಬಾರ, ಈರಣ್ಣ ಹಟ್ಟಿ, ಪರಶುರಾಮ ತೆಲಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ವಿಜಯಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.