ಭಟ್ಕಳ: ತಾಲೂಕಿನಲ್ಲಿ ಆತಂಕ ಮೂಡಿಸಿದ್ದ ಬಾಲಕನ ಕಿಡ್ನಾಪ್ ಕೇಸ್ ಭೇದಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋವಾ ಕಲ್ಲಂಗುಟ್ ನಲ್ಲಿ ಬಾಲಕ ಪತ್ತೆಯಾಗಿದ್ದು,ಆತನನ್ನು ಸೋಮವಾರ ಬೆಳಗ್ಗೆ ಭಟ್ಕಳಕ್ಕೆ ಕರೆತರಲಾಗಿದೆ. ಆತನನ್ನು ಅಪಹರಣ ಮಾಡಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಕೌಟುಂಬಿಕ ದ್ವೇಷದಿಂದ ಸಂಬಂಧಿಕರೇ ಈ ಕೃತ್ಯ ಎಸಗಿರುವುದು ಖಚಿತವಾಗಿದೆ.
ಆ.,20 ರ ರಾತ್ರಿ 8 ಗಂಟೆಗೆ ಬ್ರೆಡ್ ತರಲು ಹೋದ 8 ವರ್ಷದ ಬಾಲಕನನ್ನು ಪಟ್ಟಣದ ಆಜಾದ್ ನಗರದಲ್ಲಿ ಇಕೊ ವಾನದಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು. ಪ್ರಕರಣ ಪತ್ತೆಗೆ ಐದು ತಂಡ ರಚಿಸಲಾಗಿತ್ತು.