ಜಿಲ್ಲೆ

ಗೋಪಾಲ್​ ಜಿ.ಗೆ ಶಾಸಕ ಡಾ.ಸಿದ್ದು ಪಾಟೀಲ್​ ಸನ್ಮಾನ

ಹುಮನಾಬಾದ್​: ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಅವರನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಸನ್ಮಾನಿಸಿದರು. ರಾಮಮಂದಿರ ನಿರ್ಮಾಣ, ಸಂಘಟನಾ ಕೆಲಸ ಸೇರಿ ವಿವಿಧ ವಿಷಯಗಳ ಕುರಿತು ಗೋಪಾಲ ನಾಗರಕಟ್ಟೆ ಶಾಸಕರಿಗೆ ಮಾರ್ಗದರ್ಶನ ನೀಡಿದರು. ಶಾಸಕ ಶರಣು ಸಲಗರ, ಪ್ರಭಾಕರ ನಾಗರಾಳೆ, ವಿನಾಯಕ ಮಂಡಾ, ನಾಗೇಶ ಕಲ್ಲೂರ, ರವಿ ಮಾಡಗಿ, ನಾಗಭೂಷಣ ಸಂಗಮ, ಅನಿಲ ಪಸರ್ಗಿ ಇತರರಿದ್ದರು.