ಕಲಬುರಗಿ: ನಾಗರ ಪಂಚಮಿ ನಿಮಿತ್ತ ಗೋದುತಾಯಿ ನಗರದ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳ ತಾಯಂದಿರಿಗೆ ಮೆಹಂದಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶಿಕ್ಷಕಿ ಮನಿಷಾ ಜೋಶಿ ಮಾತನಾಡಿ, ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವುದು ಕಾರ್ಯಕ್ರಮ ಮೂಲ ಉz್ದೆÃಶವಾಗಿದೆ. ಶ್ರಾವಣ ಮಾಸದ ಪ್ರಾರಂಭದಲ್ಲಿ ಮೆಹಂದಿ ಹಾಕಿಕೊಳ್ಳುವುದು ಹಿಂದಿನ ಕಾಲದಿಂದಲೂ ಬಂದಿರುವ ಪರಂಪರೆಯಾಗಿದೆ. ಮೆಹಂದಿಯಲ್ಲಿ ಔಷಧೀಯ ಗುಣವಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಇದಲ್ಲದೆ ಮಹಿಳೆಯರಿಗೆ ಅಂದವನ್ನು ಹೆಚ್ಚಿಸುತ್ತದೆ ಎಂದರು.
ತಾಯAದಿರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅತ್ಯುತ್ತಮ ಮೆಹಂದಿ ಬಿಡಿಸಿದವರಿಗೆ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ, ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ, ಪ್ರೀತಿ ಪಾಟೀಲ್, ಶಿಕ್ಷಕಿ ಸುಜಾತಾ ನಾಗನಹಳ್ಳಿ ಇತರರಿದ್ದರಯ.