ಜಿಲ್ಲೆ

ಗೋಣಿಕೊಪ್ಪ ಶಾಲೆಯಲ್ಲಿ ಸಂಸತ್ ರಚನೆ

ಪ್ರಧಾನಿಯಾಗಿ ಧನುಷ್, ಉಪಪ್ರಧಾನಿಯಾಗಿ ಪ್ರಮೋದ್ ಆಯ್ಕೆ

ಕೊಡಗು: ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಸಂಸತ್ ರಚನೆಗೆ ಚುನಾವಣೆ ನಡೆಯಿತು. ಶಾಲೆಯ ಪ್ರಧಾನಿಯಾಗಿ 10ನೇ ತರಗತಿಯ ಧನುಷ್, ಉಪಪ್ರಧಾನಿಯಾಗಿ ಪ್ರಮೋದ್, ಕ್ರೀಡಾ ಮಂತ್ರಿಯಾಗಿ ಆಕಾಶ್, ಉಪ ಕ್ರೀಡಾ ಮಂತ್ರಿಯಾಗಿ ಮಹಿಮಾ ಆಯ್ಕೆಗೊಂಡರು.

ಉಳಿದಂತೆ ನೀರಾವರಿ ಮಂತ್ರಿಗಳಾಗಿ ಪ್ರಜ್ವಲ್, ಸುಹಾಸ್, ಆರೋಗ್ಯ ಮಂತ್ರಿಗಳಾಗಿ ನಾಜೀರ, ಸಂಜನಾ, ಆಹಾರ ಸಚಿವರಾಗಿ ಅಪೂರ್ವ, ಸಹನಾ, ಸಾಂಸ್ಕೃತಿಕ ಮಂತ್ರಿಗಳಾಗಿ ಕೃತಿಕಾ, ಕೀರ್ತನಾ, ತೋಟಗಾರಿಕಾ ಮಂತ್ರಿಗಳಾಗಿ ರಾಕೇಶ್, ಧನಲಕ್ಷ್ಮೀ, ಸ್ವಚ್ಛತಾ ಮಂತ್ರಿಗಳಾಗಿ ಗೌತಮ್, ಜಯಸೂರ್ಯ, ರಕ್ಷಣಾ ಮಂತ್ರಿಗಳಾಗಿ ಸಂತೋಷ್ ಹಾಗೂ ಆಶಿಕ್ ಆಯ್ಕೆಯಾದರು.

ಮುಖ್ಯ ಶಿಕ್ಷಕ ಕೆ.ಪಿ.ಮಹೇಶ್ ಸಮ್ಮುಖದಲ್ಲಿ ಶಿಕ್ಷಕರಾದ ರೇವತಿ, ಟಿ.ಪಿ.ಹರೀಣ, ಎಂ.ಎಸ್.ವಿದ್ಯಾ, ಜಿ.ಆರ್.ಸುಮಿ, ಆಗ್ನೇಸ್ ಐಸಾಲ್, ಎಚ್.ವಿ.ಮಂಜುಳಾ, ಎಂ.ಜಿ.ಚೇತನಾ ಹಾಗೂ ಎಚ್.ಕರಿಯಪ್ಪ ಚುನಾವಣೆ ನಡೆಸಿಕೊಟ್ಟರು. ಶಾಲೆಯ ನೂತನ ಸಚಿವರಿಗೆ ಶಿಕ್ಷಕಿ ಜಿ.ಆರ್.ಸುಮಿ ಪ್ರಮಾಣವಚನ ಬೋಧಿಸಿದರು.

ಮುಖ್ಯ ಶಿಕ್ಷಕ ಕೆ.ಪಿ.ಮಹೇಶ್ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಚುನಾವಣೆ ಕುರಿತು ಅರಿವು ಮೂಡಿಸಲು ಶಾಲಾ ಸಂಸತ್ ರಚಿಸಲಾಗಿದೆ. ಇದರಿಂದ ಚುನಾವಣೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದರು. ಪದಗ್ರಹಣ ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು , ಸಿಬ್ಬಂದಿ ಇದ್ದರು.