ಗೋಣಿಕೊಪ್ಪಲು: 47ನೇ ವರ್ಷದ ಗೋಣಿಕೊಪ್ಪ ದಸರಾ ಭಾನುವಾರದಿಂದ ಆರಂಭವಾಗಿ 11ದಿನ ಜರುಗಲಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ ಸೇರಿದಂತೆ ಕಬಡ್ಡಿ, ಬಹುಭಾಷಾ ಕವಿಗೋಷ್ಠಿ ವಿಶೇಷತೆಯಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ಇಂದಿನಿಂದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಚಾಲನೆ ಸಿಕ್ಕಿದೆ.
ಸೆ.23ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಆಯೋಜಿಸಲಾಗಿದೆ. ಸಂಜೆಯ ಸ್ಥಳೀಯ ಕಾರ್ಯಕ್ರಮದಲ್ಲಿ ಸಂಜೆ 6ಕ್ಕೆ ಪೊನ್ನಂಪೇಟೆ ಜೈಭೀಮ್ ಗಡಿನಾಡು ಜನಪದ ಕಲಾ ತಂಡದಿಂದ ಸುಗಮ ಸಂಗೀತ, ಚಿತ್ರಗೀತೆ, 7.30ಕ್ಕೆ ಭೂಮಿಕ ಕಲಾ ತಂಡದ ಶಾಸ್ತ್ರೀಯ ಸಂಗೀತ, ಭಾವಗೀತೆ, ದಾಸರ ಪದ, ಜಾನಪದ ಗೀತೆಗಳು, 8.30ಕ್ಕೆ ಗಣೇಶ್ ಭಟ್ ತಂಡದ ಸುಗಮ ಸಂಗೀತ, ಮಂಗಳೂರು ಕಲಾ ಸಂಗಮ ತಂಡದ ಶಿವಧೂತ ಗುಳಿಗೆ ಕನ್ನಡ ನಾಟಕ ನಡೆಯಲಿದೆ.
ಸೆ.24ರಂದು ಸ್ಥಳೀಯ ಕಾರ್ಯಕ್ರಮದಲ್ಲಿ ಜಗನ್ಮೋಹನ ನಾಟ್ಯಾಲಯ ತಂಡದ ಭರತನಾಟ್ಯ, ಕುಚಿಪುಡಿ, ಮೋಹಿಯಾಟ್ಟಂ, 7.30ಕ್ಕೆ ಗುಜರಾತಿ ಜನಪದ ನೃತ್ಯ, ಗಾರ್ಬಾ ಮತ್ತು ದಾಂಡಿಯಾ, ಶ್ರೀಲಕ್ಷ್ಮೀ ಮಹಿಳಾ ವಿಭಾಗದ ತಿರುವಾಧಿರ ನೃತ್ಯ, 8.30ಕ್ಕೆ ದಕ್ಷ ತರಂಗ ಬೆಂಗಳೂರು ತಂಡದ ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ಕಂಸಾಳೆ, ಪೂಜಾಕುಣಿತ, ಸೋಮನ ಕುಣಿತ, ಕುದ್ರೋಳಿ ಗಣೇಶ್ ತಂಡದ ಮ್ಯಾಜಿಕಲ್ ನೈಟ್ ನಡೆಯಲಿದೆ. ಸೆ.25ರಂದು ಸ್ಥಳೀಯ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನಾಟ್ಯ ಸಂಕಲ್ಪ ನೃತ್ಯ ಕಲಾಶಾಲೆಯ ಭರತನಾಟ್ಯ, ಜನಪದ ಹಾಗೂ ಆಧುನಿಕ ನೃತ್ಯ ಪ್ರದರ್ಶನ, 7.30ಕ್ಕೆ ಸಾರಂಗ್ ಕಲಾ ತಂಡದ ಮ್ಯಾಜಿಕ್ ಡಾನ್ಸ್, ಬಾಲ್ ಡಾನ್ಸ್, ಏರೋಬಾಟಿಕ್ ಡಾನ್ಸ್, 8.30ಕ್ಕೆ ಅನುರಾಧ ಭಟ್, ದಿವ್ಯಾ ರಾಮಚಂದ್ರ, ಖಾಸಿಮ್ ಆಲಿ, ವಿಶಾಖ್ ಅವರಿಂದ ಸಂಗೀತ ನೃತ್ಯ ಮೆಗಾ ಮ್ಯೂಸಿಕಲ್ ನೈಟ್ ನಡೆಯಲಿದೆ.
ಸೆ.26ರಂದು ಬೆಳಗ್ಗೆ 10 ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಸಂಜೆಯ ಸ್ಥಳೀಯ ಕಾರ್ಯಕ್ರಮದಲ್ಲಿ ತಿತಿಮತಿ ಯಾಹವಿ ಡಾನ್‌ಯ ಅಕಾಡೆಮಿಯ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ನೃತ್ಯ, ರವಿ ಓಂಕಾರ್ ತಂಡದ ಸಂಗೀತ, 7.30ಕ್ಕೆ ಸಭಾ ಕಾರ್ಯಕ್ರಮ, 8.30ಕ್ಕೆ ಮೈಸೂರು ಡಾನ್ಸ್ ಅಕಾಡೆಮಿಯ ನೃತ್ಯ ಕಾರ್ಯಕ್ರಮ, ಕೊಡಗು ಪೊಲೀಸರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.
ಸೆ.27ರಂದು ಬೆಳಗ್ಗೆ 9.30 ಗಂಟೆಯಿಂದ ಮಹಿಳಾ ದಸರಾ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಶಾಸ್ತ್ರೀಯ ಹಾಗೂ ಜನಪದ ನೃತ್ಯ, ಶಿವಾಜಿ ಯುವ ಸೇನೆಯಿಂದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ, 7.30ಕ್ಕೆ ಸಭಾ ಕಾರ್ಯಕ್ರಮ, 8.30ಕ್ಕೆ ರಾಘವೇಂದ್ರ ಆಲಿಯಾಸ್ ರಾಗಿಣಿ, ಚಿಲ್ಲರ್ ಮಂಜು ಹುಲಿ ಕಾರ್ತಿಕ್ ಮತ್ತು ಶಿವು ತಂಡದ ಹಾಸ್ಯೋತ್ಸವ, ಸಂಗೀತ ಸಂಜೆ ಇರಲಿದೆ.
ಸೆ.28ರಂದು ಬೆಳಗ್ಗೆ 7.30ರಿಂದ ಯುವ ದಸರಾ, ಸಂಜೆಯ ಸ್ಥಳೀಯ ಕಾರ್ಯಕ್ರಮದಲ್ಲಿ ಕಬಡ್ಡಿ ಪಂದ್ಯಾಟ, 7.30ಕ್ಕೆ ಸಭಾ ಕಾರ್ಯಕ್ರಮ, 8.30ಕ್ಕೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ.
ಸೆ.29ರಂದು ಸಂಜೆಯ ಸ್ಥಳೀಯ ಕಾರ್ಯಕ್ರಮದಲ್ಲಿ ಸೈಕ್ಲೋನ್ ಡಾನ್ಸ್ ಅಕಾಡೆಮಿ, ಸುವೃತ ನಾಟ್ಯಾಲಯದಿಂದ ನೃತ್ಯ, ಅನ್ವಿತ್ ಕುಮಾರ್ ತಂಡದ ಸಂಗಿತ ಸಂಜೆ ನಡೆಯಲಿದೆ.
ಸೆ.30ರಂದು ಸಂಜೆಯ ಸ್ಥಳೀಯ ಕಾರ್ಯಕ್ರಮದಲ್ಲಿ ನಾಣಚ್ಚಿ ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆಯ ಜೇನು ಕುರುಬರ ಹಾಡು, ನೃತ್ಯ, 7.30ಕ್ಕೆ ಸಭಾ ಕಾರ್ಯಕ್ರಮ, 8.30 ಕ್ಕೆ ಅನನ್ಯ ಭಟ್ ತಂಡದಿಂದ ಮ್ಯೂಸಿಕಲ್ ಧಮಾಕ ಇರಲಿದೆ.
ಅ.1ರಂದು ಬೆಳಗ್ಗೆ ಆಯುಧ ಪೂಜಾ ಕಾರ್ಯಕ್ರಮ. ಸಂಜೆ ಚೆಕ್ಕೇರ ಪಂಚಮ್ ತ್ಯಾಗರಾಜ್ ತಂಡದ ಕೊಡವ ಹಾಗೂ ಶಾಸ್ತ್ರೀಯ ಗಾಯನ, ಕ್ರಿಯೇಟಿವ್ ಡಾನ್ಸ್ ಅಕಾಡೆಮಿಯ ನೃತ್ಯ, 7.30ಕ್ಕೆ ಸಭಾ ಕಾರ್ಯಕ್ರಮ, ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಅದ ಮಧುರ ಈವೆಂಟ್ಸ್ ಸಂಗೀತ ರಸಸಂಜೆ ಇರಲಿದೆ.
ಅ.2ರಂದು ಮಧ್ಯಾಹ್ನ 2 ಗಂಟೆಗೆ ಸ್ತಬ್ಧಚಿತ್ರ ಮೆರವಣಿಗೆ, ಸಂಜೆ ಸಪ್ತಸ್ವರ ಮೆಲೋಡಿಸ್ ವತಿಯಿಂದ ಸಂಗೀತ, ಹರ್ಷಿತ್ ಕಿರಣ್ ಅವರಿಂದ ಭರತನಾಟ್ಯ, 7.30ಕ್ಕೆ ಸಮಾರೋಪ ಕಾರ್ಯಕ್ರಮ, 8.30ಕ್ಕೆ ಪಿವಿಆರ್ ಈವೆಂಟ್ಸ್ ವತಿಯಿಂದ ಸಂಗೀತ ರಸಮಂಜರಿ, ನೃತ್ಯ ಕಾರ್ಯಕ್ರಮ, 8 ಗಂಟೆಗೆ ಚಾಮುಂಡೇಶ್ವರಿ ಮೂರ್ತಿ ವಿಸರ್ಜನೆ ಪ್ರಯುಕ್ತ ಶೋಭಾಯತ್ರೆ ಆರಂಭ, ತಡರಾತ್ರಿ 12 ಗಂಟೆಗೆ ವಿಸರ್ಜನೆ ನೆರವೇರಲಿದೆ.