ಜಿಲ್ಲೆ

ಗೋಣಿಕೊಪ್ಪ ದಸರಾಗೆ 1 ಕೋಟಿ ರೂ. ಅನುದಾನ ನೀಡಿ

ಗೋಣಿಕೊಪ್ಪ ದಸರಾಗೆ ಅನುದಾನ ನೀಡುವಂತೆ ಒತ್ತಾಯಿಸಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ದಶ ಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ನೇತೃತ್ವದಲ್ಲಿ ಭಾನುವಾರ ಮನವಿ ಸಲ್ಲಿಸಲಾಯಿತು. ಅಜ್ಜಿಕುಟ್ಟೀರ ಸಜನ್ ಚಂಗಪ್ಪ, ಜಮ್ಮಡ ಅರಸು, ಮುರುಘ, ಟಿ.ಎನ್.ಗೋವಿಂದಪ್ಪ, ಪರಶುರಾಮ್ ಮತ್ತಿತರರಿದ್ದರು.

ಗೋಣಿಕೊಪ್ಪ: ಜಿಲ್ಲೆಯಲ್ಲಿ ದಸರಾ ಹಬ್ಬ ಕಳೆ ಕಟ್ಟುತ್ತಿದ್ದು ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ದಸರಾ ಸಮಿತಿ, ಉಪ ಸಮಿತಿಗಳು ರಚನೆಗೊಂಡಿದ್ದು ಕಾರ್ಯ ಚಟುವಟಿಕೆ ಆರಂಭಿಸಿವೆ.

ದಸರಾ ಆಚರಣೆಗೆ ಸರ್ಕಾರದ ಅನುದಾನ ಅವಶ್ಯಕತೆ ಇದ್ದು, ಗೋಣಿಕೊಪ್ಪ ದಸರಾದ ಮುಖ್ಯ ಆಕರ್ಷಣೆ ದಶಮಂಟಪ ಶೋಭ ಯಾತ್ರೆ. ಹಾಗಾಗಿ ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಅಧ್ಯಕ್ಷತೆಯಲ್ಲಿ ಭಾನುವಾರ ಬೆಳಗ್ಗೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.

ದಶ ಮಂಟಪಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ತಲಾ 5 ಲಕ್ಷ ರೂ. ಸಮಿತಿಗೆ ನೀಡುವಂತೆ ಕೋರಲಾಯಿತು. ನಿಯೋಗದ ಮನವಿಗೆ ಸ್ಪಂದಿಸಿದ ಶಾಸಕ ಎ.ಎಸ್ ಪೊನ್ನಣ್ಣ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಿ 1 ಕೋಟಿ ರೂ. ಅನುದಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಅಜ್ಜಿಕುಟ್ಟೀರ ಸಜನ್ ಚಂಗಪ್ಪ, ಜಮ್ಮಡ ಅರಸು, ಮುರುಘ, ಟಿ.ಎನ್.ಗೋವಿಂದಪ್ಪ, ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.