ಗೋಣಿಕೊಪ್ಪ: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ 6ನೇ ವಿಭಾಗದ ಸದಸ್ಯೆ ಮನ್ನಕಮನೆ ಸೌಮ್ಯಾ ಬಾಲು ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ 13 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಪೊನ್ನಂಪೇಟೆ ತಾಪಂ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಸಿ. ಅಪ್ಪಣ್ಣ ಚುನಾವಣಾಧಿಕಾರಿಯಾಗಿ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಸಹಾಯಕ ಅಧಿಕಾರಿಯಾಗಿ ಪ್ರಕ್ರಿಯೆ ನಡೆಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚೈತ್ರಾ ಬಿ.ಚೇತನ್, ಬಿ.ಎನ್.ಪ್ರಕಾಶ್, ರತಿ ಅಚ್ಚಪ್ಪ, ಕೆ.ರಾಜೇಶ್, ಪುಷ್ಪಾ ಮನೋಜ್, ವಿವೇಕ್ ರಾಯ್ಕರ್, ಜೆ.ಕೆ. ಗೀತಾ, ಕೊಣಿಯಂಡ ಬೋಜಮ್ಮ ಉತ್ತಪ್ಪ, ರಾಮ್‌ದಾಸ್, ಹಕೀಮ್, ಕೆ.ಜಿ. ರಾಮಕೃಷ್ಣ ಇದ್ದರು.
ವಿರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಪಕ್ಷದ ಪ್ರಮುಖರಾದ ಗುಮ್ಮಟ್ಟೀರ ದರ್ಶನ್ ನಂಜಪ್ಪ, ಸಿ.ಕೆ.ಬೋಪಣ್ಣ, ಕುಪ್ಪಂಡ ಗಿರಿ ಪೂವಣ್ಣ, ಸುರೇಶ್ ರೈ, ನೂರೇರ ರಂಜಿ, ರೀನಾ ರಾಜೀವ್, ಸಾಜಿ ಇತರರಯ ಹಾಜರಿದ್ದರು.