ಚಿತ್ರದುರ್ಗ: ಹಿರಿಯೂರು ತಾಲೂಕು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೋಡಂಬಿ ಬೆಳೆಗೆ ಸಂಬಂಧಿಸಿದಂತೆ ಸಂಶೋಧಿಸಿರುವ ಎಲ್ಲ ತಳಿಗಳ ಸಸ್ಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಆರ್.ಸಿ.ಜಗದೀಶ್ ಹೇಳಿದರು.
ಶಿವಮೊಗ್ಗ ಕೆಳದಿಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಗೋಡಂಬಿ ತಂತ್ರಜ್ಞಾನ ಕೇಂದ್ರ,ರೆಡ್ಡಿ ಸಮಾಜ ಹಾ ಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ಮೈದಾನ ಪ್ರದೇಶದಲ್ಲಿ ಗೇರು ಕೃಷಿ ಕು ರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ವಿವಿ ವ್ಯಾಪ್ತಿಯ ಸಂಶೋಧನಾ ಕೇಂದ್ರಗಳಲ್ಲಿ ಪ್ರತಿ ವರ್ಷ 2 ಲಕ್ಷ ಗೋಡಂಬಿ ಸಸಿಗಳನ್ನು ಸಿದ್ಧಪಡಿಸಿ ರೈತರಿಗೆ ವಿತರಿಸಲಾಗುತ್ತಿದ್ದು, ಹೊಸ ದಾಗಿ ಸಂಶೋಧಿಸಿರುವ ತಳಿಗಳ ಸಸ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು. ಗೋಡಂಬಿ ಬೆಳೆ ಸಮಗ್ರ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ಮಾತನಾಡಿ,ಹಿಂದೆ ಕರಾವಳಿ ಪ್ರದೇಶದಲ್ಲಿದ್ದ ಗೇರು ಕೃಷಿ ಕಳೆದ ದಶಕದಿಂದ ಚಿತ್ರದುರ್ಗದ ಬಯಲುಸೀಮೆಗೂ ವಿಸ್ತರಿಸಿದೆ. ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಈ ಬೆಳೆ ಯಶಸ್ಸು ಕಂಡಿದೆ. ಹಾಗಾಗಿ ಸೂಕ್ತ ತ ಳಿಗಳನ್ನು ಆಯ್ಕೆ ಮಾಡಿಕೊಂಡು ಖುಷ್ಕಿ ಪ್ರದೇಶದಲ್ಲೂ ಈ ಬೆಳೆಗೆ ಪ್ರೋತ್ಸಾಹ ಸಿಗುತ್ತಿರುವುದು ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿ ದೆ ಎಂದರು.
ಕೇಂದ್ರದ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ಮಂಡಳಿ ವಿಶ್ರಾಂತ ನಿರ್ದೇಶಕ ಡಾ.ವೆಂಕಟೇಶ್‌ಹುಬ್ಬಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ಚಿತ್ರ ದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಗೋಡಂಬಿ ಬೆಳೆಯಬೇಕು. ಈ ಬೆಳೆ ಉತ್ಪಾದಕರ ಸಂಘ ರಚಿಸಿಕೊಂಡರೆ ಕೇಂದ್ರ ಹಾಗೂ ರಾಜ್ಯಸರಕಾರಗಳಿಂದ ಹೆಚ್ಚಿನ ಸೌಲಭ್ಯ ಲಭಿಸಲಿದೆ ಎಂದರು. ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ ಮಾತನಾಡಿ,ನಮ್ಮ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಬೆಳೆಯಲು ಮುಂದಾಗ ಬೇಕೆಂದು ಸಲಹೆ ನೀಡಿದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ವಿರುಪಾಕ್ಷಪ್ಪ,ಶಿವಮೊಗ್ಗ ನವಿಲೆ ವಲಯ ಕೃಷಿ ಮತ್ತು ತೋಟಗಾರಿಕೆ ಸಹ ಸಂ ಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್,ಬಬ್ಬೂರುಫಾರ್ಮ್ ವಲಯ ಕೃಷಿ ಮತ್ತು ತೋಟಗಾರಿಕೆ ಸಹ ಸಂಶೋಧನಾ ನಿರ್ದೇಶಕ ಸುರೇಶ್ ಡಿ.ಏಕಬೋಟೆ,ರೆಡ್ಡಿ ಸಮಾಜದ ಅಧ್ಯಕ್ಷ ಸಿ.ರಾಘವರೆಡ್ಡಿ,ಉಪಾಧ್ಯಕ್ಷ ವೆಂಕಟಶಿವರೆಡ್ಡಿ,ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಕೆ.ಶ್ರೀನಿವಾಸ್‌ರೆಡ್ಡಿ, ಕಾರ್ಯದರ್ಶಿ ವೀರಭದ್ರರೆಡ್ಡಿ,ನಿವೃತ್ತ ರಿಜಿಸ್ಟ್ರಾರ್ ಡಾ.ರಾಮಸ್ವಾಮಿ, ಜಲತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ ಮತ್ತಿತರರು ಇದ್ದರು.
ಗೋವಾದ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎ.ಆರ್.ದೇಸಾಯಿ, ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವಪ್ಪರ್,ಹೊಗಳಗೆರೆ ಎಐಸಿಆರ್‌ಪಿ ಗೋಡಂಬಿ ವಿಭಾಗದ ಮುಖ್ಯಸ್ಥ ಡಾ.ಅಶ್ವತ್ಥನಾರಾಯಣರೆಡ್ಡಿ ಉಪನ್ಯಾಸ ನೀಡಿದರು.