ಜಿಲ್ಲೆ

ಗೋಕಾಕ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

ಗೋಕಾಕ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ:
ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು
ಬೆಳಗಾವಿ: ಹಳೇ ವೈಷಮ್ಯಕ್ಕೆ ಶನಿವಾರ ನಡೆದ ಪರಶುರಾಮ್ ಗೊಂಧಳಿ ಕೊಲೆ ಆರೋಪಿಗಳ ಪತ್ತೆಗೆ ಗೋಕಾಕ ಪೊಲೀಸರು ಬಲೆ ಬೀಸಿದ್ದಾರೆ.
 ಗೋಕಾಕ್ ನಗರದ ಗೊಂಧಳಿ ಗಲ್ಲಿಯ ನಿವಾಸಿ ಪರುಶರಾಮ್ ಕಾರಿನಲ್ಲಿ ಸ್ನೇಹಿತರ ಜತೆಗೆ ಓಡಾಡುತ್ತಿದ್ದ ಈತ, ಏಕಾಏಕಿ ಭೀಕರವಾಗಿ ಕೊಲೆಯಾಗಿದ್ದಾನೆ. ಈ ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದಿದ್ದಾರೆ.ಕೊಲೆಗೆ ಕೊಲೆಗೆ ಹಳೇಯ ವೈಷ್ಯಮ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈಗಾಗಲೇ ಆರೋಪಿಗಳ ಗುರುತು ಪೊಲೀಸರಿಗೆ ಸಿಕ್ಕಿದೆ. ಇನ್ನೂ ಕೊಲೆ ಆರೋಪಿ ವಿಶಾಲ್ ಮೆಸ್ತ್ರಿ, ಹಾಗೂ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಯತ್ನ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ಶೃತಿ ಮೃತ ಪರಶುರಾಮ್ ಗೊಂಧಳಿ ಹಾಗೂ ಆರೋಪಿಗಳ ಸ್ನೇಹಿತರಾಗಿದ್ದು, ಹಳೇಯ ವೈಶಮ್ಯಕ್ಕೆ ಕೊಲೆ ಮಾಡಲಾಗಿದೆ. ಇನ್ನೂ ಗೋಕಾಕ್ ಶಹರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಮೃತ ಹಾಗೂ ಆರೋಪಿಗಳ ಮೇಲೆ ಹಲವು ಪ್ರಕರಣಗಳು ಸಹ ಇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಗೋಕಾಕ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.