ಸಾಲೂರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ
ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶನಿವಾರ ಸಂಜೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗೋ ಪೂಜೆ ನೆರವೇರಿಸಿದರು.ದೀಪಾವಳಿ ಬಲಿಪಾಡ್ಯಮಿ ನಿಮಿತ್ತ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳು ಗೋವುಗಳಿಗೆ ಅಕ್ಕಿ, ಬೆಲ್ಲ ಹಾಗೂ ಸಿಹಿ ತಿನಿಸು ನೀಡಿದರು.
ನಂತರ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ಗೋವುಗಳಿಗೆ ತಾಯಿ ಸ್ಥಾನವನ್ನು ನೀಡಲಾಗಿದೆ. ಗೋಮಾತೆ ಎಂದೇ ಭಾವಿಸಿ ಪೂಜಿಸಲಾಗುತ್ತದೆ. ಹಾಗಾಗಿ ಭಾರತೀಯ ತಳಿಯ ಗೋವುಗಳ ರಕ್ಷಣೆ ಮಾಡಲು ಈ ಸಂದರ್ಭ ಸಂಕಲ್ಪ ಮಾಡೋಣ ಎಂದರು.