ಶಿವಮೊಗ್ಗ: ಭಾರತ ಜಗತ್ತಿನಲ್ಲಿ ಮತ್ತೊಮ್ಮೆ ಭಾರತವಾಗಿ ಪ್ರಕಾಶಿಸಲು ಭೂಮಿ ಜತೆಗೆ ಗೋವುಗಳನ್ನು ಗೌರವಿಸುವ ಅಗತ್ಯತೆ ಇದೆ ಎಂದು ಆರ್ಎಸ್ಎಸ್ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಂ ಹೇಳಿದರು.
ಬಾಪೂಜಿ ಆಯುರ್ವೆದ ಕಾಲೇಜು ಆವರಣದಲ್ಲಿ ಸೋಮವಾರ ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ ಸಂಸ್ಥೆ, ವಿಎಚ್ಪಿ, ಗೋ ರಕ್ಷಣಾ ವೇದಿಕೆ ಮತ್ತು ವಾಸವಿ ಶಾಲೆ ಆಶ್ರಯದಲ್ಲಿ ‘ಗೋವುಗಳಿಗೆ ಮೇವು ಆಂದೋಲನ’ಕ್ಕಾಗಿ ಮೇವು ಬೀಜ ಬಿತ್ತನೆ ಮಾಡಿ ಮಾತನಾಡಿದ ಅವರು, ಗೋವು ಮತ್ತು ಭೂಮಿ ಸಂರಕ್ಷಣೆಯಲ್ಲಿ ದೇಶದ ಏಳ್ಗೆ ಇದೆ ಎಂದರು.
ಗೋವು ಹೆತ್ತ ತಾಯಿಗಿಂತಲೂ ಶ್ರೇಷ್ಠ. ಒಬ್ಬ ತಾಯಿಯಾದವಳು ಮಕ್ಕಳನ್ನು ಹೆತ್ತು-ಹೊತ್ತು ಬೆಳೆಸುತ್ತಾಳೆ. ಮಗು ಜನಿಸಿದಾಗಿನಿಂದ ಒಂದೂವರೆ-ಎರಡು ವರ್ಷದವರೆಗೆ ಸ್ತನ್ಯಪಾನವನ್ನೂ ಮಾಡಿಸುತ್ತಾಳೆ. ಆದರೆ ಗೋವುಗಳು ನಾವು ಜೀವಂತ ಇರುವವರೆಗೂ ಒಂದಲ್ಲಾ ಒಂದು ರೂಪದಲ್ಲಿ ಹಾಲು ಕುಡಿಸುತ್ತವೆ. ಆ ಕಾರಣದಿಂದಲೇ ಗೋವುಗಳು ಶ್ರೇಷ್ಠ ಎಂದು ಹೇಳಿದರು.
ಗೋವು ಸಾಕಣೆಯಲ್ಲಿ ಶ್ರದ್ಧೆ ಹಾಗೂ ಗೋವು ಉತ್ಪನ್ನಗಳನ್ನು ಭೂಮಿಗೆ ಬಳಸಿ ಕೃಷಿ ಮಾಡುವುದರಿಂದ ದೇಶ ಸಮೃದ್ಧವಾಗುವುದರ ಜತೆಗೆ ಆರೋಗ್ಯಯುತ ಸಮಾಜ ನಿರ್ವಣವಾಗಲಿದೆ. ಹಿಂದೆ ಗೋವು ಸಾಕಣೆ ಸಮೃದ್ಧವಾಗಿತ್ತು. ಹೀಗಾಗಿ ಜನರು ಕೂಡ ಆರೋಗ್ಯವಾಗಿದ್ದರು. ಆದರೆ ಕ್ರಮೇಣ ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಗೋವು ಸಾಕಣೆ ಪ್ರಮಾಣ ಕಡಿಮೆಯಾಗಿದೆ. ಮೇವು ಕೂಡ ಸಿಕ್ಕದ ಸ್ಥಿತಿ ನಿರ್ವಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಗರದ 35 ವಾರ್ಡ್ಗಳಲ್ಲಿ ಮೇವು ಬೆಳೆಸುವ ಕಾರ್ಯ ಮಾಡಲಾಗುತ್ತದೆ. ಖಾಲಿ ನಿವೇಶನ ಇರುವವರು ಮೇವು ಬೆಳೆಸಲು ನೀಡಿದರೆ ನಗರ ಹಸಿರಾಗುತ್ತದೆ ಹಾಗೂ ಸ್ವಚ್ಛಗೊಳ್ಳುತ್ತದೆ ಎಂದರು.
ನಮ್ಮ ಕನಸಿನ ಶಿವಮೊಗ್ಗ ಅಧ್ಯಕ್ಷ ಎನ್.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯುರ್ವೆದಿಕ್ ಕಾಲೇಜಿನ ಎಂ.ವಿ.ಪಿ.ಆರಾಧ್ಯ, ಉಪ ಮೇಯರ್ ಸುರೇಖಾ ಮುರಳೀಧರ್, ವಿಎಚ್ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು, ಎಸ್.ಕೆ.ಶೇಷಾಚಲ, ಆ.ನಾ.ವಿಜಜಯೇಂದ್ರ ರಾವ್, ಮಧುಸೂಧನ್ ಉಪಸ್ಥಿತರಿದ್ದರು.