ಜಿಲ್ಲೆ

ಗೊಲ್ಲ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು: ಸಿಎಂ ಸಿದ್ದರಾಮಯ್ಯ

ಗೊಲ್ಲ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು: ಸಿಎಂ ಸಿದ್ದರಾಮಯ್ಯ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಹಿಂದುಳಿದ ಯಾದವ ಗೊಲ್ಲ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮಕ್ಕಳಿಗೆ ಶಿಕ್ಷಣ ನೀಡಬೇಕು,ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.

ಚಿಕ್ಕೋಡಿ ಪಟ್ಟಣದ ಆರ್.ಡಿ ಹೈಸ್ಕೂಲï ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘದ ಶತಮಾನೋತ್ಸವ ಹಾಗೂ ಶ್ರೀ ಯಾದವಾನಂದ ಸ್ವಾಮೀಜಿಯವರ ೧೬ನೇ ಪಟ್ಟಾಭೀಷೇಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರವ ಕೆಲಸವನ್ನು ಸಮಾಜದ ಮುಖಂಡರು ಮಾಡಬೇಕು,ಅವಕಾಶಗಳಿಂದ ವಂಚಿತ ಹಿಂದುಳಿದ, ದಲಿತರು ಶಿಕ್ಷಣ ಪಡೆಯಬೇಕು,ಶಿಕ್ಷಣ, ಸಂಘಟನೆ ,ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದು ಸಾಮಾಜಿಕ,ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು ಎಂದು ಅವರು ಕರೆ ನೀಡಿದರು.

ಯಾದವರ ಆರಾಧ್ಯ ದೈವ ಶ್ರೀ ಕೃಷ್ಣನ ಜಯಂತಿ ಪ್ರಾರಂಭಿಸಿದ್ದು ನಾನು, ಯಾದವ ಗೊಲ್ಲ ಸಮುದಾಯದಲ್ಲಿ ಅನೇಕ ಉಪಜಾತಿಗಳಿವೇ.ಅವುಗಳನ್ನು ಒಂದೇ ವೇದಿಕೆಗೆ ತರವು ಕೆಲಸವನ್ನು ವಿ.ಪ ಸದಸ್ಯ ಟಿ.ಡಿ.ಶ್ರೀನಿವಾಸ ದಂಪತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ, ಆರ್ಥಿಕ ಸಹಾಯ ನೀಡುತ್ತೆನೆ ಎಂದು ಅವರು ಭರವಸೆ ನೀಡಿದರು.

ಸಮಾಜದಲ್ಲಿ ಸಮಾನತೇ ಬರಬೇಕು

ನಾನು ಮುಖ್ಯಮಂತ್ರಿ ಆದಾಗನಿಂದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ.

ಹಿಂದುಳಿದ ಸಮಾಜಗಳ ಆರ್ಥಿಕ ಪ್ರಗತಿಗೆ ಪ್ರಾತಿನಿಧ್ಯ ನೀಡಿದ್ದನೆ..ಎಲ್ಲರಿಗೂ ಸಮಾನ ಸಂಪತ್ತು ಹಂಚಿಕೆಗೆ ಪ್ರಯತ್ನ ಮಾಡುತ್ತಿದ್ದೆನೆ

ಡಾ.ಬಾಬಾಸಾಹೇಬ ಅಂಬೇಡ್ಕರ್ ಮಾತಿನಂತೆ ಶಿಕ್ಷಣ,ಸಂಘಟನೆ,ಹೋರಾಟದ ಮೂಲಕ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ.

ನಾನು ಸಿಎಂ ಆಗಿದ್ದು ನನ್ನ ವಿದ್ಯೆಯಿಂದ ,ಆದ್ದರಿಂದ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಕರೆ ನೀಡಿದರು.

ರಾಜ್ಯ ಗೊಲ್ಲ( ಯಾದವ) ಸಂಘದ ರಾಜ್ಯ ಅಧ್ಯಕ್ಷ ಹಾಗೂ ವಿ.ಪ ಸದಸ್ಯರು ಆದ ಟಿ.ಡಿ.ಶ್ರೀನಿವಾಸ ಮಾತನಾಡಿ ರಾಜ್ಯದಲ್ಲಿ ಸುಮಾರು ೨೫ ಲಕ್ಷ ದಷ್ಟಿರುವ ಯಾದವ ಗೊಲ್ಲ ಸಮಾಜದ ಏಳ್ಗೆಗೆ ಹುಟ್ಟಿಕೊಂಡಿರುವ ಸಂಘದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ.ಗೊಲ್ಲ ಸಮಾಜವನ್ನು ಪ್ರ ವರ್ಗ ೧ರ ಮೀಸಲಾತಿ ಕಲ್ಪಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು. ಸಮಾಜದ ಅವಕಾಶ ವಂಚಿತ,ದೀನ ದಲಿತ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯು ಮುಖ್ಯಮಂತ್ರಿಗಳ ಬೆನ್ನಿಗೆ ಸಮುದಾಯ ನಿಲ್ಲಬೇಕು ಕರೆ ನೀಡಿದರು.

ಸಮುದಾಯದ ಬೇಡಿಕೆ ಈಡೇರಿಸಿ

ಶ್ರೀ ಕೃಷ್ಣನ ಸಮಾಜದ ಯಾದವ,ಗೊಲ್ಲ,ಗವಳಿ,ಗೌಳಿ,ಹಣಬರ ಸೇರಿದಂತೆ ೨೮ ಹೆಸರಿನಿಂದ ಕರೆಯಲಾಗಿದೆ.ಯಾದವನಂದ ಮಠಕ್ಕೆ ಐದು ಕೋಟಿ ನೀಡಬೇಕು,ಬೆಂಗಳೂರಿನಲ್ಲಿ ಯಾದವನಂದ ಶಾಖಾ ಮಠಕ್ಕೆ ಕುಂಬಳಗೋಡದ ಶಾಖಾ ಮಠ ಗೋಶಾಲೆ ನಿರ್ಮಾಣ ಮಂಜೂರ ಮಾಡಬೇಕು, ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ಜಿಲ್ಲಾ ಕೇಂದ್ರದ ಸಮುದಾಯ ಭವನ ನಿರ್ಮಾಣಕ್ಕೆ ತಲಾ ಐವತ್ತು ಲಕ್ಷ ರೂ.ಅನುದಾನ ನೀಡಬೇಕು,ಗೊಲ್ಲ ಉಪ ಜಾತಿಗಳಿಗೆ ಕುಲ ಶಾಸ್ತ್ರೀಯ ಅದ್ಯಯನ ಮಾಡಿ ಅವುಗಳ ಕಲ್ಯಾಣಕ್ಕಾಗಿ ಅನುದಾನ ನೀಡಬೇಕು,ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು,ನಿಗಮ ಮಂಡಳಿ ಅಧ್ಯಕ್ಷ ರ ನೇಮಕದಲ್ಲಿ ಸಮುದಾಯದ ಮುಖಂಡರನ್ನು ಪರಿಗಣಿಸಬೇಕು,ಮುಂಬರುವ ತಾ.ಪ.ಜಿ.ಪಂ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಸಮುದಾಯದ ಬೇಡಿಕೆಗಳನ್ನು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಿಟ್ಟರು.

ಸಾನಿದ್ಯ ವಹಿಸಿದ್ದ ಚಿತ್ರದುರ್ಗದ ಗೊಲ್ಲಗೇರಿಯ ಕೃಷ್ಣ ಯಾದವನಂದ ಸ್ವಾಮೀಜಿ ಮಾತನಾಡಿ ಗೊಲ್ಲರ ಶೈಕ್ಷಣಿಕ ,ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಣಬರ,ಗವಳಿ ,ಗೊಲ್ಲ ಸೇರಿದಂತೆ ಎಲ್ಲ ಉಪಜಾತಿಗಳ ಶ್ರೋಯೋಭಿವೃದ್ದಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಣಬರ ಸಮಾಜದ ಸಾಧಕರನ್ನು ವೇದಿಕೆಯಲ್ಲಿ ಸತ್ಕರಿಸಲಾಯಿತು.

ಚಿಕ್ಕೋಡಿಯ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಹೊಸದುರ್ಗದ ಭಗೀರಥ ಗುರುಪೀಠದ ಡಾ. ಪುರಷೋತ್ತಮಾನಂದಪುರಿ ಸ್ವಾಮೀಜಿ,ಕುಂಚಟಿಗ ಮಹಾಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮೀಜಿ, ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ,ಭೋವಿಉ ಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಅಂಬಿಗರ ಚೌಡಯ್ಯ ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ,

ಸಚಿವರಾದ ಬೈರತಿ ಸುರೇಶ,ಸಂಸದೆ ಪ್ರಿಯಾಂಕ ಜಾರಕಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ಇತರರಿದ್ದರು.