oppo_0 
ಜಿಲ್ಲೆ

ಗೊರೇಬಾಳದಲ್ಲಿ ತುಳಸಿ ವಿವಾಹ ಸಂಭ್ರಮ

ಗೊರೇಬಾಳ: ಗ್ರಾಮದಲ್ಲಿ ಮಹಿಳೆಯರು ತುಳಸಿ ವಿವಾಹವನ್ನು ಬುಧವಾರ ಸಂಭ್ರಮದಿಂದ ನೆರವೇರಿಸಿದರು.

ತುಳಸಿ ಗಿಡವನ್ನು ಮದುಮಗಳಾಗಿ ಅಲಂಕರಿಸಿ ಕಾಡ ನೇರಳೆ ಗಿಡವನ್ನು ಮದುಮಗನ ಸ್ಥಾನದಲ್ಲಿ ಕೂಡಿಸಿ ಹಾರ ಹಾಕಿದ ನಂತರ ಮಾಂಗಲ್ಯ ಮಂತ್ರ ಪಠಿಸಲಾಯಿತು. ಸುಮಂಗಲೆಯರು ಕಳಸ ಬೆಳಗಿಸುವ ಮೂಲಕ ಶುಭ ಹಾರೈಸಿದರು. ಗೌರಮ್ಮ ಭೋವಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಪಾರ್ವತಮ್ಮ ಭೋವಿ, ಯಲ್ಲಮ್ಮ ಭೊವಿ, ಲಕ್ಷ್ಮೀ ನಾಯಕ, ರತ್ನಮ್ಮ ಹರೇಟನೂರ, ರುದ್ರಮ್ಮ ಹರೇಟನೂರ, ಹಮೀದಾ ಬೇಗಂ, ಮಂಜುಳಮ್ಮ, ಸರಸ್ವತಿ ,ಲಾವಣ್ಯ, ದೀಪಾ.ಭೀಮಮ್ಮ ಕುದ್ರಿ, ಗಂಗಮ್ಮ ನಕ್ಕುಂದಿ, ತಿಮ್ಮಮ್ಮ ಇತರರು ಇದ್ದರು.