ಜಿಲ್ಲೆ

ಗೊರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರ ಕೊಡುಗೆ

ಹಾಸನ: ಗೊರೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಒಂದು ವರ್ಷದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸುವ ಇಸಿಜಿ ಯಂತ್ರವನ್ನು ಹೇಮಾವತಿ ಪವರ್ ಲೈಟ್ ಪ್ರೈವೇಟ್ ಲಿಮಿಟೆಡ್ ಕೊಟ್ಟಿರುವುದು ಶ್ಲಾಘನೀಯ ಎಂದು ಗೊರೂರು ಆಡಳಿತ ವೈದ್ಯಾಧಿಕಾರಿ ಡಾ. ತೇಜಸ್ವಿ ಹೇಳಿದರು.
ಗೊರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಹೇಮಾವತಿ ಪವರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅತ್ಯಾಧುನಿಕ ಇಸಿಜಿ ಮಷೀನ್, ಬೆಡ್ ವಿತ್ ಕಾಟ್ ವಿತರಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗಿಗಳಿಗೆ ಅತ್ಯವಶ್ಯಕವಾಗಿರುವ ಇಂತಹ ಸಲಕರಣೆಗಳನ್ನು ನೀಡುವ ಕಾರ್ಯ ಹೆಚ್ಚಬೇಕು ಎಂದು ಆಶಿಸಿದರು.
ಹೇಮಾವತಿ ಪವರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಹ ಮುಖ್ಯ ವ್ಯವಸ್ಥಾಪಕ ಎ.ಎನ್. ಲೋಕೇಶ್ ಮಾತನಾಡಿ, ಸಂಸ್ಥೆಯು ಪ್ರತಿವರ್ಷ ಈ ರೀತಿ ಜನಸ್ನೇಹಿ ಕೆಲಸವನ್ನು ಮಾಡುತ್ತಿದ್ದು ಈ ವರ್ಷ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಬಳಕೆಗೆ ಇಸಿಜಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನೀಡಿರುವುದು ಖುಷಿ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಆದಿತ್ಯ, ಮುಖಂಡರಾದ ಧರಣೇಶ್, ಕಮಲಾಕ್ಷಿ ಶಿವಣ್ಣ, ಮಹೇಂದ್ರ ಕುಮಾರ್, ಮಂಜುನಾಥ್, ಶಿವರಾಜ್, ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.