filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2097152;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತ ರೈತರು

ಬುಕ್ಕಪಟ್ಟಣ: ಸಮಯಕ್ಕೆ ಸರಿಯಾಗಿ ಯೂರಿಯಾ ಸಿಗದೆ ರೈತರು ಕಂಗಾಲಾಗಿದ್ದು, ಅಂಗಡಿ ಮುಂದೆ ರಾತ್ರಿ 9 ಗಂಟೆ ಆದರೂ ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಲ್ಲುವ ಸ್ಥಿತಿ ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ನಿಮಾಣವಾಗಿದೆ. ಹೋಬಳಿಯಲ್ಲಿ ಮುಂಗಾರು ಮಳೆಯಾದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಪುಬ್ಬ ಮಳೆ ಸುರಿದು ರೈತರಿಗೆ ಕೃಷಿ ಚಟುವಟಿಕೆ ಆರಂಭಿಸಲು ಅನುವು ಮಾಡಿಕೊಟ್ಟಿತು. ಆದರೆ ಸಕಾಲದಲ್ಲಿ ಗೊಬ್ಬರ ಸಿಗದೆ ಈಗ ರಾತ್ರಿಯೆಲ್ಲ ಅಂಗಡಿ ಎಂದೆ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕೃತಕ ರಸಗೊಬ್ಬರ ಕೊರತೆ ಸೃಷ್ಟಿಸುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡು ಎಲ್ಲ ರೈತರಿಗೂ ರಸಗೊಬ್ಬರ ಸಿಗಯವಂತೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ರಸಗೊಬ್ಬರದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳುತ್ತಿದ್ದು, ನ್ಯಾನೋ ಯೂರಿಯಾ ಬಳಸುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ. ಅಧಿಕೃತ ಡೀಲರ್​ ಹೊರತು ಪಡಿಸಿ ಯಾರಾದರೂ ಅಕ್ರಮ ದಾಸ್ತಾನು ಮಾಡಿಕೊಂಡ ಬಗ್ಗೆ ವರದಿ ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೈತರು ಆಧಾರ್​ ಕಾರ್ಡ್​ ನೀಡಿ ತಮಗೆ ಎಷ್ಟು ಬೇಕೋ ಅಷ್ಟು ರಸಗೊಬ್ಬರ ತೆಗೆದುಕೊಂಡು ಹೋಗಬೇಕು. -ನಟರಾಜು ಪ್ರಭಾರ ಕೃಷಿ ಅಧಿಕಾರಿ, ಬುಕ್ಕಾಪಟ್ಟಣ ರೈತರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆೆ ಸಿಗುವುದಿಲ್ಲ. ಮಳೆ ಬಂದು ಬೆಳೆ ಹಾಳಾದರೆ, ಕೆಲವೊಮ್ಮೆ ಬರಗಾಲದಿಂದ ಹಾಳಾಗುತ್ತದೆ. ಸಮಯಕ್ಕೆ ಸರಿಯಾಗಿ ಬೀಜ ಬಿತ್ತನೆ ಮಾಡಲು ಸರ್ಕಾರ ರಸಗೊಬ್ಬರ ಪೂರೈಕೆ ಮಾಡುತ್ತಿಲ್ಲ. ನ್ಯಾನೋ ಯೂರಿಯಾ ಬಳಸಲು ಸರಿಯಾದ ಮಾಹಿತಿಯ ಇಲ್ಲ. ಸರ್ಕಾರ ಇತ್ತ ಗಮನಹರಿಸಿ ರೈತರಿಗೆ ರಸಗೊಬ್ಬರಗಳ ಪೂರೈಕೆ ಹೆಚ್ಚಿಸಬೇಕು. -ಕುಮಾರಸ್ವಾಮಿ ರೈತ, ಹೂಯಿಲ್​ ದೊರೆ ಬುಕ್ಕಾಪಟ್ಟಣ