ಜಿಲ್ಲೆ

ಗೊತ್ತಿಲ್ಲದೆ 17 ಕೋಟಿ ರೂ. ಮಂಜೂರು: ಬಿ.ಆರ್​.ಪಾಟೀಲ್​ ಮತ್ತೊಂದು ಆರೋಪ

ಕಲಬುರಗಿ: ಆಳಂದ ವಿಧಾನಸಭೆ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಇಲಾಖೆಯಿಂದ 17 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ನನಗೆ ಗುದ್ದಲಿ ಪೂಜೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಮೊದಲೇ ತಿಳಿಸಿದರೆ ನಾನು ಕೆಕೆಆರ್​ಡಿಬಿ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುತ್ತಿದೆ. ಹೀಗೆ ಹೇಳದೇ ಕೇಳದೆ ಹಣ ಬಿಡುಗಡೆ ಮಾಡಿದರೆ ಡುಪ್ಲಿಕೇಷನ್​ ಆಗುತ್ತದೆ. ಸರ್ಕಾರದ ಹಣ ವ್ಯರ್ಥವಾಗುತ್ತದೆ ಎಂದು ಶಾಸಕ ಬಿ.ಆರ್​.ಪಾಟೀಲ್​ ಅಸಮಾಧಾನ ವ್ಯಕ್ತಪಡಿಸಿದರು. ನಾನು ಕೆಕೆಆರ್​ಡಿಬಿಯಿಂದ ಮೌಲನಾ ಅಬುಲ್​ ಕಲಾಂ ಶಾಲೆ ಕಟ್ಟುತ್ತಿದ್ದೇನೆ. ಅಲ್ಪಸಂಖ್ಯಾತ ಇಲಾಖೆಯಿಂದ ಪುನ: ಹಣ ಮಂಜೂರು ಮಾಡಿಸಿದ್ದಾರೆ. ನಾನು ಶಾಸಕನಾಗಿ ಬೇಡಿಕೆಯೂ ಮಂಡಿಸಿಲ್ಲ. ಇವರು ಏಕೆ ನೀಡಿದ್ದಾರೆ. ನನಗೆ ಹೇಳದೇ ಕಾಮಗಾರಿ ಮಾಡುತ್ತಿರುವುದರಿಂದ ಹಕ್ಕುಚ್ಯುತಿ ನೋಟಿಸ್​ ನೀಡುವಂತೆ ಸಭಾಪತಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.