ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆ ನಗರದ ಹನುಮಂತ ಸುಗತೇಕರ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸುತ್ತಿರುವ ಕುಟುಂಬಸ್ಥರು.  
ಜಿಲ್ಲೆ

ಗೊಂಧಳಿ ಸೇವೆಗೆ ದೇವಿ ನೀಡಿದ ಫಲ...!

ಸಂತೋಷ ದೇಶಪಾಂಡೆ ಬಾಗಲಕೋಟೆ: ಅಪ್ಪ ನಿತ್ಯವು ಹಾಡುತ್ತಿದ್ದ ಗೊಂಧಳಿ ಪದ. ಚಿಕ್ಕ ವಯಸ್ಸಿನಲ್ಲಿ ಕಿವಿಯಲ್ಲಿ ಗುಂಯ್ಯ ಗೂಡುತ್ತಲೆ ಇತ್ತು. ರಕ್ತಗತವಾಗಿ ಮನೆತನ ಸೇವೆಯೂ ಹೌದು. ಹೀಗಾಗಿ ಶಾಲೆ ಮೆಟ್ಟಿಲು ಹತ್ತುವ ಪ್ರಸರಂಗ ಬರಲಿಲ್ಲ. ತಾಯಿ ಅಂಭಾಭವಾನಿ ಸೇವೆ ಮಾಡುತ್ತಲೆ ಸಾಗಿದೆ. ಇಂದು ಹಂತಕ್ಕೆ ತಂದು ನಿಲ್ಲಿಸಿದೆ...!!!

ಕರ್ನಾಟಕ ಜಾನಪದ ಅಕಾಡೆಮಿ -೨೦೨೩ ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ ಅಭಿಮಾನದ ಮಾತುಗಳಿವು. ನೌಕರಿ ಅಂತ ಏನು ಮಾಡಲಿಲ್ಲ. ಕುಟುಂಬದ ಬಳುವಳಿಯಾಗಿ ಬಂದಿದ್ದ ಗೋಂಧಳಿ ಪದವೇ ನನ್ನ ಬದುಕು ರೂಪಿಸಿತು. ಅದರಿಂದಲೇ ಜೀವನ ಕಟ್ಟಿಕೊಂಡು ಸಾಗಿದೆ. ತಂದೆ, ತಾಯಿ ಆಶೀರ್ವಾದ, ಅಭಿಮಾನಿಗಳ ಪ್ರೋತ್ಸಾಹದಿಂದ ಸಾಧನೆ ಮಾಡುವಂತಾಯಿತು ಎಂದು ಹನಮಂತ ಕಣ್ಣಂಚಿನಲ್ಲಿ ನೀರಾಡಿದವು. ಇವರಿಗೆ ಪತ್ನಿ ಜಾನಾಬಾಯಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಜನ ಮನ ಸೂರೆಗೊಳಿಸಿದ ಪ್ರತಿಭೆ:

ಪುರಂದರ ದಾಸರು, ಶಿಶುನಾಳ ಶರೀಫರ ಪದಗಳು, ದೇವಿ ಪದಗಳು, ಬಿಡ, ಮಡಿವಾಳ ರಾಚಯ್ಯ, ಕನಕದಾಸರ ಪದಗಳು, ತತ್ವ ಪದಗಳು, ಅಂಭಾ ಭವಾನಿ ಪದಗಳು ಹಾಗೂ ರೇಣುಕಾ ದೇವಿಗಳು ಪದಗಳನ್ನು ಅಚ್ಚಾಕಟ್ಟಾಗಿ ಹಾಡುತ್ತಾರೆ. ಆಕಾಶವಾಣಿಯಲ್ಲಿ ೧೮ ಸಾರಿ, ದೂರದರ್ಶನದಲ್ಲಿ ೬ ಬಾರಿ, ಆಂಧ್ರ ಪ್ರದೇಶದ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನ, ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವ, ಮೈಸೂರಿನಲ್ಲಿ ನಾಟಕೋತ್ಸವ, ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ, ಶ್ರವಣ ಬೆಳಗೂಳ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ, ಚಾಲುಕ್ಯ ಉತ್ಸವ, ಕರಾವಳಿ ಉತ್ಸವ, ನವರಸಪುರ ಉತ್ಸವ ಸೇರಿದಂತೆ ದೆಹಲಿ, ಕೇರಳ, ಆಂಧ್ರಪ್ರದೇಶ, ನವ ದೆಹಲಿ ಯಲ್ಲಿ ನಡೆದ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೂಲಕ ಜನ ಮನ ಸೂರೆಗೊಂಡಿದ್ದಾರೆ. ಆಕಾಶವಾಣಿ ಬ್ರೀ ಗೇಡ್ ಪಶಸ್ತಿ ಸೇರಿದಂತೆ ಹತ್ತು, ಹಲವು ಪ್ರಶಸ್ತಿಗಳು ಹನಮಂತ ಸುಗತೇಕರ ಅವರಿಗೆ ಸಿಕ್ಕಿದೆ.

ನಮ್ಮ ಕುಟುಂಬವು ಗೋಂಧಳಿ ಸೇವೆಯಲ್ಲಿ ನಿರತವಾಗಿದೆ. ತಂದೆ ವೆಂಕಪ್ಪ ಸುಗತೇಕರ ಅವರು ಹಾಡುತ್ತಿದ್ದ ಪದಗಳು ನಿತ್ಯವು ಕೇಳುತ್ತಿದ್ದೆ. ಅವರ ಜೊತೆ ಕಾರ್ಯಕ್ರಮ ನೀಡುತ್ತಿದ್ದೆ. ರಕ್ತಗತವಾಗಿ ಈ ಕಲೆ ಒಲಿದು ಬಂದಿತು. ಶಾಲೆ ಮಟ್ಟಿಲು ಹತ್ತಲಿಲ್ಲ. ಗೋಂಧಳಿ ಪದ ಮೂಲಕ ಸೇವೆ, ವೃತ್ತಿ ನಡೆಯಿತು. ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ಮೂರು ಜನ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ಅವರಿಗೂ ಈ ಗೋಂಧಳಿ ಪದ ಬಗ್ಗೆ ಆಸಕ್ತಿ ಇದೆ. ತಾಯಿ ಅಂಭಾ ಭವಾನಿ ಕೃಪೆಯೇ ನಮಗೆ ಶ್ರೀರಕ್ಷೆ. ಪ್ರಶಸ್ತಿಯಿಂದ ಸಂತಸ ಉಂಟಾಗಿದೆ. ಸೇವೆ ಹಂಬಲ ಹೆಚ್ಚಾಗಿದೆ ಎಂದು ಹನಮಂತ ಸುಗತೇಕರ ವಿಜಯವಾಣಿಗೆ ತಿಳಿಸಿದರು.