ಯಾದಗಿರಿ: ಇಡೀ ಜಗತ್ತು ಕಾತರದಿಂದ ಎದುರು ನೋಡುತ್ತಿರುವ ಭಾರತ-ಐಸೀಸ್ ಏಕದಿನ ವಿಶ್ವಕಪ್ ಫೈನಲ್ ಮ್ಯಾಚ್ ಭಾನುವಾರ ಗುಜರಾತ್ನ ಅಹಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತದ ತಂಡಕ್ಕೆ ಇಲ್ಲಿನ ಪ್ರತಿಷ್ಠಿತ ಶಾಂತಿ ಸದನ ಶಾಲೆಯ ಚಿಣ್ಣರು ಶುಭ ಹಾರೈಸಿದ್ದಾರೆ.
ಐಸೀಸ್ನೊಂದಿಗೆ ಭಾರತ ಮುಖಾಮುಖಿಯಾಗಿ ಹಲವು ವರ್ಷಗಳು ಕಳೆದಿದ್ದು, ಈ ಮ್ಯಾಚ್ನಲ್ಲಿ ನಮ್ಮ ಕ್ರಿಕೆಟ್ ತಂಡ ವಿಜಯ ಸಾಧಿಸಿ, ವಿಶ್ವಕಪ್ ತನ್ನ ಮುಡಿಗೇರಿಸಿಕೊಳ್ಳಲಿ ಎಂದು ಮಕ್ಕಳು ಹಾರೈಸಿದರು. ಗೆದ್ದು ಬಾ ಟೀಮ್ ಇಂಡಿಯಾ ಎಂದು ಏಕ ಕಂಠದಿಂದ ಹರಸಿದ ಮಕ್ಕಳ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.
ಶಾಲಾ ಮುಖ್ಯಸ್ಥರಾದ ಸಾಹೇಬರಡ್ಡಿ ಬಕ್ಕಾ, ಕಾರ್ಯದಶರ್ಿ ಬಸವಂತರಡ್ಡಿ ವೀರಡ್ಡಿ ಮತ್ತು ಶಿಕ್ಷಕರು ಇದ್ದರು.