ಜಿಲ್ಲೆ

‘ಗೃಹಲಕ್ಷ್ಮೀ’ನೋಂದಣಿ ಆರಂಭ,ಡಿಸಿ ದಿವ್ಯಾಪ್ರಭು


ಚಿತ್ರದುರ್ಗ: ಗೃಹಲಕ್ಷ್ಮೀ ಯೋಜನೆಯಡಿ ಬುಧವಾರದಿಂದ ಅರ್ಹ ಫಲಾನುಭವಿಗಳ ನೋಂದಣಿ ಪ್ರಾರಂಭವಾಗಿದೆ ಎಂದು ಡಿಸಿ ಜಿಆರ್‌ಜೆ ದಿ ವ್ಯಾ ಪ್ರಭು ತಿಳಿಸಿದ್ದಾರೆ. ಪಡಿತರ ಚೀಟಿಯಲ್ಲಿರುವ ಮನೆ ಯಜಮಾನಿ ಈ ಯೋಜನೆ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಅಥವಾ ಆಕೆ ಪತಿ ಆದಾಯ ತೆರಿಗೆ,ಜಿಎಸ್‌ಟಿ ಪಾವತಿದಾರರಾಗಿರಬಾರದು.

ಎರಡು ವಿಧಾನಗಳಲ್ಲಿ ನೋಂದಣಿ ಸಾಧ್ಯವಿದೆ. ರೇಷನ್ ಕಾರ್ಡ್‌ನಲ್ಲಿರುವ ಯಜಮಾನಿಗೆ ನೋಂದಣಿಗೆ ದಿನಾಂಕ, ಸಮಯ ಹಾ ಗೂ ನೋಂದಣಿ ಸ್ಥಳದ ವಿವರಗಳನ್ನು ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ- ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರ,ನಗರ ಪ್ರದೇಶದಲ್ಲಿ ಕರ್ನಾಟಕ-ಒನ್ ಬೆಂಗಳೂರು-ಒನ್,ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿ ಗಳು ನೋಂದಣಿ ಕೇಂದ್ರಗಳಾಗಿರುತ್ತವೆ.

ಪ್ರಜಾಪ್ರತಿನಿಧಿ ಮನೆಗೆ ಭೇಟಿ ನೀಡಿದ್ದಂಥ ಸಂದರ್ಭದಲ್ಲೂ ನೋಂದಾಯಿಸಲು ಅವಕಾಶವಿದೆ. ಪ್ರತಿ ಫಲಾನುಭವಿ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ,ಸಮಯ ಮತ್ತು ಸ್ಥಳವನ್ನು 1902 ಗೆ ಕರೆ ಮಾಡಿ ಅಥವಾ 8147500500 ನಂಬರ್‌ಗೆ ಎಸ್‌ಎಂಎಸ್ ಮೂ ಲಕ ಸಂದೇಶ ಕಳಿಸಿ ಮಾಹಿತಿ ಪಡೆಯಬಹುದಾಗಿದೆ.

ಒಂದು ವೇಳೆ ನಿಗದಿಪಡಿಸಿದ ದಿನಾಂಕ,ಸಮಯದಂದು ನಿರ್ದಿಷ್ಟಪಡಿಸಿದ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಅದೇ ಸೇವಾ ಕೇಂದ್ರ ಗಳಿಗೆ ಮುಂದಿನ ಯಾವುದೇ ದಿನಾಂಕಗಳಂದು ಸಂಜೆ 5ರಿಂದ 7 ಗಂಟೆಯೊಳಗೆ ನೋಂದಾಯಿಸಲು ಅವಕಾಶವಿದೆ. ಪಡಿ ತರ ಚೀಟಿ ಸಂಖ್ಯೆ,ಫಲಾನುಭವಿ ಆಧಾರ್ ಕಾರ್ಡ್ ಸಂಖ್ಯೆ,ಫಲಾನುಭವಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್‌ಬುಕ್/ಪರ್ಯಾಯ ಬ್ಯಾಂಕ್ ಖಾತೆ ಪಾಸ್‌ಬುಕ್)ನೋಂದಣಿಗೆ ಅಗತ್ಯವಿರುತ್ತದೆ.

ವಿವಿಧ ಕೇಂದ್ರಗಳಲ್ಲಿ ನೋಂದಾಯಿಸಿದವರಿಗೆ ಮಂಜೂರಾತ್ರಿ ಪತ್ರವನ್ನು,ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿದವರಿಗೆ ನಂತರ ದಲ್ಲಿ ಅವರ ಮನೆಗೆ ಮಂಜೂರಾತಿ ಪತ್ರ ತಲುಪಿಸಲಾಗುವುದು. ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಮಾಸಿಕ 2000 ರೂ.ಜಮೆ ಮಾಡಲಾಗುವುದು. ನೋಂದಣಿಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲವೆಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಸಿಟಿಡಿ 19 ಡಿಸಿ ಮಗ್‌ಶಾಟ್)