ಮುದಗಲ್‌ನ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುರಸಭೆ ಸದಸ್ಯರಾದ ಅಮೀರಬೇಗ್ ಉಸ್ತಾದ್, ಎಸ್‌ಆರ್.ರಸೂಲ್, ಮೈಬೂಬು ಕಡ್ಡಿಪುಡಿ, ಬಾಬು ಉಪ್ಪಾರ, ಹನುಮಂತ ನಾಯಕ, ಪುರಸಭೆ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್, ಸಿಬ್ಬಂದಿ ಚನ್ನಮ್ಮ, ಮಹ್ಮದ ಜಿಲಾನಿ ಪಾಷಾ, ಆರೀಫ್ ಬೇಗಂ ಇತರರಿದ್ದರು. 
ಜಿಲ್ಲೆ

ಗೃಹಲಕ್ಷ್ಮೀ ಯೋಜನೆಗೆ ಅದ್ದೂರಿ ಚಾಲನೆ

Gangavati - Desk - Veeresh S Ullagaddi

ಮುದಗಲ್: ಕಿಲ್ಲಾದಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಪುರಸಭೆಯಿಂದ ಅದ್ದೂರಿಯಾಗಿ ಬುಧವಾರ ಚಾಲನೆ ನೀಡಲಾಯಿತು.


ಕಾರ್ಯಕ್ರಮ ವೇದಿಕೆಯಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ರಾಹುಲ್ ಗಾಂಧಿ ಯೋಜನೆಗೆ ಚಾಲನೆ ನೀಡುವುದನ್ನು ನೇರ ಪ್ರಸಾರ ವೀಕ್ಷಿಸಿದ ಸಾವಿರಾರು ಮಹಿಳೆಯರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರಿಂದ ವೇದಿಕೆಯ ಮುಂಭಾಗದಲ್ಲಿ ಜಾಗ ಮತ್ತು ಖುರ್ಚಿಗಳು ಇಲ್ಲದೆ ಮಹಿಳೆಯರು ತಾಸಿಗೂ ಅಧಿಕ ಸಮಯ ನಿಂತು ಕಾರ್ಯಕ್ರಮ ವೀಕ್ಷಿಸಿದರು.


ಕಾರ್ಯಕ್ರಮಕ್ಕೆ ಪುರಸಭೆ ಮಹಿಳಾ ಸದಸ್ಯರು ಗೈರಾಗಿದ್ದು ಎದ್ದುಕಾಣುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ ಕಾರ್ಯಕ್ರಮ ವೇದಿಕೆಯಲ್ಲಿ ಮಹಿಳಾ ಸದಸ್ಯರ ಬದಲಿಗೆ ಅವರ ಪತಿ ಮತ್ತು ಮಕ್ಕಳನ್ನು ಪುರಸಭೆ ಅಧಿಕಾರಿಗಳು ಆಹ್ವಾನಿಸಿ ಕಾರ್ಯಕ್ರಮಕ್ಕೆ ಚಾಲನೆ ಮಾಡಿಸಿದ್ದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಯಿತು.