ಕೊಪ್ಪ ತಾಲೂಕು ಪಂಚಾಯಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು. ಎಚ್.ಶಶಿಕುಮಾರ್, ಸಂತೋಷ್, ವಸಂತಿ ಪಾಂಡುರಂಗ ಇತರರಿದ್ದರು. 
ಜಿಲ್ಲೆ

ಗೃಹಜ್ಯೋತಿ ಇದ್ದರೂ ಮೆಸ್ಕಾಂನಿಂದ ಬಿಲ್

ಕೊಪ್ಪ: ತಾಲೂಕಿನ ಸಾಕಷ್ಟು ಜನರಿಗೆ, ಅದರಲ್ಲಿಯೂ ಬಡವರಿಗೆ ಗೃಹಜ್ಯೋತಿ ಇದ್ದರೂ ಮೆಸ್ಕಾಂನಿಂದ ಬಿಲ್ ನೀಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರು ಗಮನಕ್ಕೆ ತಂದರು.

ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಗಹಜ್ಯೋತಿ ಯೋಜನೆ ಲಾಭ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರಿಗೆ 200 ರೂ.ವರೆಗೆ ಬಿಲ್ ಬಂದಿದೆ. ಕೂಡಲೇ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಮೇಲ್ವಿಚಾರಕ ಸುರೇಶ್, ಗ್ರಾಹಕರು ಈ ಹಿಂದಿನ ಎರಡು, ಮೂರು ಬಿಲ್‌ಗಳನ್ನು ತಂದರೆ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ತಾಪಂ ವ್ಯವಸ್ಥಾಪಕ ಸುಹಾಸ್ ಮಾತನಾಡಿ, ಯುವ ನಿಧಿಗೆ ಅರ್ಜಿ ಸಲ್ಲಿಸಿದ ಲಾನುಭವಿಗಳಿಗೆ 64 ಲಕ್ಷ ರೂ. ಮೊತ್ತ ಡಿಬಿಟಿ ಮೂಲಕ ಸಂದಾಯವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಶಿಶು ಅಭಿವದ್ಧಿ ಯೋಜನಾಧಿಕಾರಿ ವೀಣಾ ಮಾತನಾಡಿ, ಗಹಲಕ್ಷ್ಮಿಗೆ 387 ಹೊಸ ಅರ್ಜಿ ಬಂದಿದೆ. ಮೇವರೆಗೆ ಗಹಲಕ್ಷ್ಮಿ ಹಣ ತಲುಪಿದೆ ಎಂದು ಮಾಹಿತಿ ನೀಡಿದರು.

ಆಹಾರ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ತಾಲೂಕಿನಲ್ಲಿ ಜೂನ್‌ನಲ್ಲಿ ಶೇ.80 ರಷ್ಟು ಪಡಿತರ ವಿತರಣೆಯಾಗಿದೆ. ಅಕ್ಕಿ ಜತೆಗೆ ಇತರ ವಸ್ತುಗಳನ್ನು ವಿತರಿಸುವ ಇಂದಿರಾ ಕಿಟ್ ಬಗ್ಗೆ ಮಾಹಿತಿ ಇಲ್ಲ ಎಂದು ಸಭೆಗೆ ತಿಳಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್, ಡಿ.ಎಸ್.ಸಂತೋಷ್, ವಸಂತಿ ಪಾಂಡುರಂಗ, ಶೋಭಾ, ಪೂರ್ಣಿಮಾ, ಪ್ರವೀಣ್‌ಕುಮಾರ್, ರಾಘವೇಂದ್ರ, ಪ್ರವೀಣ್, ನಾಗೇಂದ್ರ ಪ್ರಸಾದ್, ಎಚ್.ಎಸ್.ಆದರ್ಶ, ನರೇಂದ್ರ ಶೆಟ್ಟಿ ಇತರರಿದ್ದರು.