ಹಾಸನ: ವೇಗವಾಗಿ ಹೋಗುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಬೇಲೂರು ತಾಲೂಕಿನ ಮುಗಳವಳ್ಳಿ ಗ್ರಾಮದ ಬಳಿ ಸೋಮವಾರ ನಡೆದಿದೆ.
ಬೇಲೂರು ತಾಲೂಕಿನ ಮುಗಳವಳ್ಳಿ ಗ್ರಾಮದ ನಿವಾಸಿಯಾದ ನಾಗೇಶಗೌಡ ನಾಗರಾಜು (55) ಮೃತ ಚಾಲಕ.
ನಾಗೇಶಗೌಡ ಗೂಡ್ಸ್ ವಾಹನದ ಚಾಲಕನಾಗಿ ಹಾಸನದ ಅಶೋಕ ನಗರದಲ್ಲಿ ವಾಸವಾಗಿದ್ದರು. ಸ್ವಂತ ಊರಾದ ಮುಗಳವಳ್ಳಿ ಗ್ರಾಮಕ್ಕೆ ಹಬ್ಬಕ್ಕೆಂದು ಸೋಮವಾರ ಹಾಸನದಿಂದ ಹೊರಟಿದ್ದರು. ಮುಗಳವಳ್ಳಿ ಗ್ರಾಮದ ಹತ್ತಿರ ಗಡಿಯಲ್ಲಿ ಬರುತ್ತಿರುವಾಗ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ರಸ್ತೆಯ ಬಲಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ. ನಾಗೇಶಗೌಡ ನಾಗರಾಜು ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕೂಡಲೇ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗೇಶಗೌಡ ನಾಗರಾಜು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.