ಜಿಲ್ಲೆ

ಗೂಡ್ಸ್ ವಾಹನ ಪಲ್ಟಿ

ಮದ್ದೂರು ತಾಲೂಕಿನ ಕೆ. ಕೋಡಿಹಳ್ಳಿ ಗ್ರಾಮದ ಬಳಿ ಅಲಂಕಾರಿಕ ಗಿಡಗಳ ಪಾಟ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿಯಾಗಿರುವುದು.

ಎಂ.ರವಿ

ಮದ್ದೂರು: ಟೈಯರ್ ಸಿಡಿದ ಪರಿಣಾಮ ಅಲಂಕಾರಿಕ ಗಿಡಗಳ ಪಾಟ್‌ಗಳನ್ನು ತುಂಬಿದ್ದ ಗೂಡ್ಸ್ ವಾಹನ ರಾಷ್ಟ್ರೀಯ ಹೆದ್ದಾರಿಯ ಕೆ. ಕೋಡಿಹಳ್ಳಿ ಗ್ರಾಮದ ಬಳಿ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರಿನಿಂದ ಮೈಸೂರಿಗೆ ಗೂಡ್ಸ್ ವಾಹನದಲ್ಲಿ 300ಕ್ಕೂ ಹೆಚ್ಚು ಅಲಂಕಾರಿಕ ಗಿಡಗಳ ಪಾಟ್‌ಗಳನ್ನು ಬುಧವಾರ ತೆಗೆದುಕೊಂಡು ಹೋಗಲಾಗುತ್ತಿತ್ತು. ಕೆ.ಕೋಡಿಹಳ್ಳಿ ಗ್ರಾಮದ ಬಳಿ ಹಿಂಭಾಗದ ಟೈಯರ್ ಸಿಡಿದು ಹೆದ್ದಾರಿಯಲ್ಲಿ ಪಲ್ಟಿಯಾದ ಕಾರಣ ಅಲಂಕಾರಿಕ ಗಿಡಗಳ ಪಾಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮದ್ದೂರಿನ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.