ಜಿಲ್ಲೆ

ಗುಹ್ಯ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಆಂದೋಲನ

ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದಿಂದ ಗುಹ್ಯ ಸರ್ಕಾರಿ ಶಾಲೆಯಲ್ಲಿ ಭಾನುವಾರ ಸ್ವಚ್ಛತಾ ಆಂದೋಲನ ಜರುಗಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದುರ್ಗಾದೇವಿ, ಓಂ ಶಕ್ತಿ, ಸನ್ನಿಧಿ, ಏಕದಂತ, ಉದಯ ಸೂರ್ಯ ಸಂಘದ 25ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ಶ್ರಮದಾನದ ಮೂಲಕ ಶಾಲೆಯಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿದರು.

ಒಕ್ಕೂಟದ ಅಧ್ಯಕ್ಷ ಉದಯ್, ಕಾರ್ಯದರ್ಶಿ ಧನುಷ್, ಸೇವಾ ಪ್ರತಿನಿಧಿ ಉಷಾ, ಪ್ರಮುಖರಾದ ಮಣಿ, ವಿಶ್ವನಾಥ್, ರಮೇಶ್, ಪುಷ್ಪಾ, ಸಂಧ್ಯಾ, ಪಾರ್ವತಿ, ರಶ್ಮಿ, ದೀಕ್ಷಿತ್, ಶಾರದಾ, ಭವಾನಿ, ಜ್ಯೋತಿ ಇತರರು ಇದ್ದರು.