ಕಲಬುರಗಿ: ಒಂದು, ಎರಡು ವಿಷಯ (ಪ್ರಥಮ, ತೃತೀಯ ಸೆಮ್)ಗಳಲ್ಲಿ ೆÃಲ್ ಆದವರನ್ನು ೨, ೪ನೇ ಸೆಮ್‌ಗೆ ಪ್ರಮೋಟ್ ಮಾಡಲ್ಲ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಹೊರಡಿಸಿದ ಆದೇಶ ಖಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರೊನಾ ಕಾರಣಕ್ಕೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿ ಉನ್ನತ ಶಿP್ಷÀಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಗುಲ್ಬರ್ಗ ವಿವಿ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಕಾರಣಕ್ಕೆ ೨೦೨೦ , ೨೦೨೧ ಕ್ರಮವಾಗಿ ನಡೆಯಬೇಕಿದ್ದ ಎರಡು, ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಮೋಟ್ ಮಾಡಲಾಗಿತ್ತು. ಇದಕ್ಕೆ ಒಂದು, ಮೂರನೇ ಸೆಮಿಸ್ಟರ್ ಫಲಿತಾಂಶ ಆಧಾರವಾಗಿ ಇಟ್ಟುಕೊಳ್ಳಲಾಗಿತ್ತು. ಆದರೀಗ ದಿಢೀರ್ ವಿವಿ ಸುತ್ತೋಲೆ ಹೊರಡಿಸಿ , ೨ ಮತ್ತು ೪ನೇ ಸೆಮ್ ಪರೀಕ್ಷೆಗಳನ್ನು ಬರೆಯಲೇಬೇಕು ಎಂದು ಹೇಳಿದ್ದು ವಿದ್ಯಾರ್ಥಿಗಳಲ್ಲಿ ಆಘಾತ ಮೂಡಿಸಿದೆ. ಲಾಕ್‌ಡೌನ್‌ನಿಂದ ೨, ೪ನೇ ಸೆಮ್‌ನ ಒಂದೂ ತರಗತಿ ನಡೆದಿಲ್ಲ. ಪಠ್ಯದ ಏನೆಂಬುದು ಗೊತ್ತಿಲ್ಲ . ಹೀಗಿರುವಾಗ ಪರೀಕ್ಷೆ ಬರೆಯಬೇಕು ಎಂದು ಹೇಳಿದರೆ ಏನು ಮಾಡಬೇಕು ಎಂದು ಕಿಡಿ ಕಾರಿದರು.
ತP್ಷÀಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಹಿಂದೆ ತಿಳಿಸಿದಂತೆ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಪ್ರೋಮೋಟ್ ಮಾಡಿರುವ ನಿಲುವು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದುವರೆಸಿ ಸದ್ಯ ವಿವಿ ಹೊರಡಿಸಿರುವ ಗೊಂದಲದ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಾಳೆ ಸಂಜೆಯೊಳಗೆ ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ನಗರದ ವಿವಿಧ ಕಾಲೇಜುಗಳ ನೂರಾರು ಪದವಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.