ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ೪೨ನೇ ವಾರ್ಷಿಕ ಘಟಿಕೋತ್ಸವ ಆ.೧೨ರಂದು ಬೆಳಗ್ಗೆ ೧೧ಕ್ಕೆ ವಿವಿ ಜ್ಞಾನಗಂಗಾ ಆವರಣದಲ್ಲಿ ಜರುಗಲಿದೆ. ರಾಜ್ಯಪಾಲರೂ ಆದ ವಿವಿ ಕುಲಾಧಿಪತಿ ಥಾವರಚಂದ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಸಮಕುಲಾಧಿಪತಿ ಡಾ.ಎಂ.ಸಿ. ಸುಧಾಕರ್, ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಉಪಸ್ಥಿತರಿರುವರು. ಗೋವಾ ಡೋನಾ ಪೌಲಾ ಸಿಎಸ್‌ಐಆರ್ ರಾಷ್ಟಿçÃಯ ಸಾಗರಶಾಸ್ತç ಸಂಸ್ಥೆ ನಿರ್ದೇಶಕ ಪ್ರೊ.ಸುನೀಲಕುಮಾರ ಸಿಂಗ್ ಘಟಿಕೋತ್ಸವ ಭಾಷಣ ಮಾಡುವರು.