ಜಿಲ್ಲೆ

ಗುಲ್ಬರ್ಗ ದಾಲ್ ಮಿಲ್ಲರ್ಸ್ ಸಂಘಕ್ಕೆ ಚಂದ್ರಶೇಖರ ಕೋಬಾಳ್ ಸಾರಥ್ಯ

ಜಯತೀರ್ಥ ಪಾಟೀಲ

ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿರುವ ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್‌ಗೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಚಂದ್ರಶೇಖರ ಕೋಬಾಳ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು ೨೩೪ ಮತಗಳು ಚಲಾವಣೆ ಆಗಿದ್ದು, ಈ ಪೈಕಿ ಚಂದ್ರಶೇಖರ ಕೋಬಾಳ್ ೧೭೨ ಮತ ಪಡೆದರು.

ಪ್ರತಿಸ್ಪರ್ಧಿ ಭೀಮಾಶಂಕರ ಪಾಟೀಲ್‌ಗೆ ೬೧ಮತ ಬಂದಿವೆ. ಒಂದು ಮತ ತಿರಸ್ಕೃತಗೊಂಡಿದೆ. ಶರಣಬಸಪ್ಪ ಮಚಟ್ಟ, ವಿಷ್ಣುದಾಸ್ ತಪಡಿಯಾ (ಉಪಾಧ್ಯಕ್ಷರು), ಹನುಮಂತರಾಯ ಎಂ.ತೋಟನಳ್ಳಿ (ಕಾರ್ಯದರ್ಶಿ), ಲಿಂಗಬಸಪ್ಪ ಆರ್. (ಜಂಟಿ ಕಾರ್ಯದರ್ಶಿ), ಕಿರಣ ಚಿಂಚೋಳಿ (ಖಜಾಂಚಿ), ಸದಸ್ಯರಾಗಿ ಅರವಿಂದ್ ತೋಶ್ನಿವಾಲ್, ಭೀಮಾಶಂಕರ ಕಲಶೆಟ್ಟಿ, ನಿಜಾಮುದ್ದೀನ್, ರಾಜಶೇಖರ ಇಟಗಂಪಳ್ಳಿ, ಉಮೇಶ ಪಿ.ಅಡಕಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.