ಘಟಪ್ರಭಾದ ಸಹಕಾರ ಮಹರ್ಷಿ ಬಿ.ಎ.ಪಾಟೀಲ ಆಯುರ್ವೇದಿಕ್ ಮೆಡಿಕಲ್ ಕಾಲೇಜದ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆ ಸೊಸೈಟಿ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಡಾ.ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿ.ಆರ್.ಪಾಟೀಲ(ನಾಗನೂರ), ಎ.ಎನ್.ಕರಲಿಂಗನ್ನವರ, ಆರ್.ಟಿ.ಶಿರಾಳಕರ, ಅಪ್ಪಯ್ಯಪ್ಪ ಬಡಕುಂದ್ರಿ ಇತರರಿದ್ದರು. 
ಜಿಲ್ಲೆ

ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆಯಿಂದ ಉತ್ತಮ ಸೇವೆ

ಘಟಪ್ರಭಾ, ಬೆಳಗಾವಿ: ಸಂಸ್ಥೆಯು ಯಾವ ಉದ್ದೇಶಕ್ಕಾಗಿ ಪ್ರಾರಂಭವಾಯಿತೋ ಆ ಉದ್ದೇಶಗಳನ್ನು ಈಡೇರಿಸಲು ಪ್ರಯತ್ನಿಸುತ್ತ 71 ವರ್ಷ ಕಳೆದಿದೆ. ಸಂಸ್ಥೆಯ ಆಸ್ಪತ್ರೆಯಲ್ಲಿ ಇಷ್ಟು ವರ್ಷಗಳಲ್ಲಿ ಲಕ್ಷಾಂತರ ರೋಗಿಗಳಿಗೆ ಕಡಿಮೆ ದರದಲ್ಲಿ ಯೋಗ್ಯ ಚಿಕಿತ್ಸ್ಸೆ ನೀಡಿದ ಕೀರ್ತಿ ನಮ್ಮ ಸಂಸ್ಥೆಗೆ ಸಲ್ಲುತ್ತದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಹಕಾರ ಮಹರ್ಷಿ ಬಿ.ಎ.ಪಾಟೀಲ ಆಯುರ್ವೇದಿಕ್ ಮೆಡಿಕಲ್ ಕಾಲೇಜದ ಸಭಾಗೃಹದಲ್ಲಿ ಸ್ಥಳೀಯ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆ ಸೊಸೈಟಿ ನಿ.2021-22ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಬುಧವಾರ ಆಶೀರ್ವಚನ ನೀಡಿದರು.

ಇತ್ತೀಚೆಗೆ ನಿಧನರಾದ ಸಚಿವ ಉಮೇಶ ಕತ್ತಿ ಮತ್ತು ಸಂಸ್ಥೆಯ ಗ್ರಂಥಪಾಲಕ ಎಸ್.ಬಿ. ಚಳಕೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದಸ್ಯರಿಂದ ಸಂಸ್ಥೆಯ ಆಸ್ಪತ್ರೆ ಇನ್ನೂ ಯಾವ ಯಾವ ರೀತಿಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬಹುದು ಎಂದು ಸಲಹೆ-ಸೂಚನೆ ನೀಡಲಾಯಿತು. 2021-22 ಆಯ-ವ್ಯಯಗಳನ್ನು ಓದಿ ಹೇಳಲಾಯಿತು.

ಸಂಸ್ಥೆಯ ಚೇರ್ಮನ್ ಬಿ.ಆರ್.ಪಾಟೀಲ(ನಾಗನೂರ), ಉಪಾಧ್ಯಕ್ಷ ಎ.ಎನ್.ಕರಲಿಂಗನ್ನವರ, ಆರ್.ಟಿ.ಶಿರಾಳಕರ, ಅಪ್ಪಯ್ಯಪ್ಪ ಬಡಕುಂದ್ರಿ, ಚಂದ್ರಶೇಖರ ಕಾಡದವರ, ಸಂಸ್ಥೆಯ ವ್ಯವಸ್ಥಾಪಕ ಎಂ.ಬಿ.ಹಗರಿ ಇತರರಿದ್ದರು.