Have unique devotion to Guru  
ಜಿಲ್ಲೆ

ಗುರುವಿನಲ್ಲಿ ಅನನ್ಯವಾದ ಭಕ್ತಿ ಇರಲಿ

ತೇರದಾಳ: ಪುಣ್ಯ ಸಂಪಾಧಿಸಲು ಗುರುವಿನ ಮಾತು ಪಾಲಿಸಬೇಕೆಂದು ರಬಕವಿಯ ಗುರುಸಿದ್ಧೇಶ್ವರ ಶ್ರೀ ಹೇಳಿದರು.

ಕೃಷ್ಣಾ ತೀರದ ತಮದಡ್ಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಚಂದ್ರಗಿರಿದೇವಿ ಮತ್ತು ಗುರು ಗಂಗಾಧರ ಮಠದ ಸಮುದಾಯ ಭವನ ಉದ್ಘಾಟನೆ ಹಾಗೂ ದೇವಸ್ಥಾನದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರು ಕರುಣಾಮಯಿ. ಗುರುವಿನ ಪ್ರೀತಿ ಅಮೂಲ್ಯವಾದುದು ಎಂದರು.

ಶೇಗುಣಸಿ ಶಂಕರಲಿಂಗ ಯೋಗೇಂದ್ರ ಶಿವಯೋಗಿ, ಸೊಕ್ಕೆ ಅತೀತಾಮಠದ ಸಾರಂಗಪ್ಪಯ್ಯ ಶ್ರೀ, ಜಕನೂರ ಸಿದ್ಧಲಿಂಗದೇವರು ಆಶೀರ್ವಚನ ನೀಡಿದರು.

ಬಬಲಾದಿಯ ಬಸಯ್ಯ ಸ್ವಾಮೀಜಿ, ಓಂಕಾರಯ್ಯ ಸ್ವಾಮೀಜಿ, ಶಾಸಕ ಸಿದ್ದು ಸವದಿ, ಸತೀಶ ಹಜಾರೆ ಇದ್ದರು.