ವಿದ್ಯಾಭ್ಯಾಸದ ಬಳಿಕ ಉತ್ತಮ ನಾಗರಿಕರಾಗಿ ಬದುಕನ್ನು ರೂಪಿಸಿಕೊಳ್ಳಲು ಗುರುವಿನ ಕೃಪೆ ಅಗತ್ಯವೆಂದು ಮುರುಘಾ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.
ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ,ಎಸ್‌ಜೆಎಂ ಪಾಲಿಟೆಕ್ನಿಕ್ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಗುರುವಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ನಾಗರಿಕರಾಗಿ,ಬದುಕಿನೊಂದಿಗೆ ಸಮಾಜಮುಖಿ ಕೆಲಸಗಳಿಗೂ ಕೈ ಜೋಡಿಸಿದರೆ ಅದೇ ಅವರು ಗುರುಗಳಿಗೆ ಕೊಡುವಂತಹ ಕಾಣಿಕೆ ಯಾಗಿದೆ. ಹಳೆಯ ವಿದ್ಯಾರ್ಥಿಗಳು ಸೇರಿ ಗುರುವಂದನೆ ನೆರವೇರಿಸುತ್ತಿರುವುದು ಆಶಾದಾಯಖವಾಗಿದೆ. ಇಂಥ ಸಂಘಟನೆಗಳು ಸಮಾಜ ಮುಖಿ ಕೆಲಸಗಳನ್ನು ಮಾಡಬೇಕಿದೆ ಎಂದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ,ಹಿರಿಯರ ಉತ್ತಮ ಕಾರ‌್ಯಗಳನ್ನು ನೆನಪು ಮಾಡಿಕೊಂ ಡರೆ ಅದನ್ನ ಮುಂದಿನವರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ. ಮಠದ ಮೂರು ರತ್ನಗಳಾದ ಜಯದೇವ ಶ್ರೀ,ಜಯವಿಭಶ್ರೀ ಮತ್ತು ಮಲ್ಲಿ ಕಾರ್ಜುನ ಶ್ರೀಗಳ ಕಾರ‌್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಹಳೆಯ ವಿದ್ಯಾರ್ಥಿಗಳ ಸಂಗಮ ಅದ್ಭುತ ಕಾರ‌್ಯವಾಗಿದೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳು ಮಠಕ್ಕೆ ಬರುವುದು ಹೆಮ್ಮೆ ಮತ್ತು ನಿಮ್ಮ ಹಕ್ಕು. ಸಮಾಜಮುಖಿ ಕೆಲಸಗಳಲ್ಲಿ ನೀವು ಕೈ ಜೋಡಿಸಬೇಕಿದೆ ಎಂದರು.
ಪ್ರಾಧ್ಯಾಪಕಿ ನಾಗವೇಣಿ ಪ್ರಾಸ್ತಾವಿಕವಾಗಿ ಮಾತನಾಡಿ,ಗುರು-ಶಿಷ್ಯರ ನಡುವೆ ಉತ್ತಮ ಸಂಬಂಧವಿರ ಬೇಕು,ಹಳೆಯ ಮತ್ತು ಹೊಸ ವಿದ್ಯಾ ರ್ಥಿಗಳ ನಡುವೆ ಈ ಸಂಘ ಸೇತುವೆಯಾಗಿ ಕೆಲಸ ಮಾಡಲಿದೆ ಎಂದರು. ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಪಿ.ಎಸ್.ಶಂಕರ್,ಡಾ.ಎಸ್. ವಿ.ಚಂದ್ರಶೇಖರ್,ಅಪರ ಸಾರಿಗೆ ಆಯುಕ್ತ ಬಿ.ಡಿ.ಉಮಾಶಂಕರ್,ಪ್ರಾಚಾರ‌್ಯ ಎಸ್.ವಿ.ರವಿಶಂಕರ್,ಎನ್.ಜಯಣ್ಣ,ಮಹಾದೇವ,ಸತ್ಯನಾರಾ ಯಣನಾಯಕ,ಎಸ್.ಆರ್.ವೆಂಕಟೇಶ್,ಕೆ.ವಿ.ಸುರೇಶ್,ನಾಗಭೂಷಣ್ ಇತರರು ಇದ್ದರು. ಲಕ್ಷ್ಮೀ,ಸಂಜನಾ,ಸಿಂಚನಾ,ಪೂಜಿತಾ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು.ಪದ್ಮಾವತಿ ನಿರೂಪಿಸಿದರು.