ಲೋಕ ಕಲ್ಯಾಣಾರ್ಥ ಮೌನಾನುಷ್ಠಾನ ಪೂರ್ಣಗೊಳಿಸಿದ ಮಳಖೇಡ ಭಂಗಿಮಠದ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರ ಪಾದಪೂಜೆ ನೆರವೇರಿಸಿ, ಸತ್ಕರಿಸಲಾಯಿತು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶ್ರೀ ಶಿವಯೋಗಿ ಶಿವಾಚಾರ್ಯರು ಇದ್ದರು. 
ಜಿಲ್ಲೆ

ಗುರುವಿಗಿದೆ ಮಾನವನ ಕರ್ಮ ಕಳೆಯುವ ಶಕ್ತಿ

ಮಳಖೇಡ: ಕರ್ಮ ಯಾವತ್ತೂ ಯಾರನ್ನೂ ಬಿಡುವುದಿಲ್ಲ. ಮಾನವನು ಮಾಡಿದ ಕರ್ಮವನ್ನು ಕಳೆಯುವ ಶಕ್ತಿ ಗುರುವಿಗಿದೆ. ಹೀಗಾಗಿ ಗುರುವಿನ ಸೇವೆ ಮಾಡಿ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದು ಮೂಲಾಧಾರ ಸಂಸ್ಥಾನ ಬೃಹನ್ಮಠದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಹೇಳಿದರು.

ಅಧಿಕ ಮಾಸದ ನಿಮಿತ್ತ ಭಂಗಿಮಠದ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು ೧೧ ದಿನ ಮೌನಾನುಷ್ಠಾನ ಪೂರ್ಣಗೊಳಿಸಿದ್ದು, ಶುಕ್ರವಾರ ಹಮ್ಮಿಕೊಂಡಿದ್ದ ಮಹಾಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅಧಿಕ ಮಾಸದ ಅಧಿಪತಿ ಶಿವ. ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ ಜತೆಗೆ ಮನಸ್ಸಿನಿಂದ ಒಳ್ಳೆಯದು ಮಾಡುವುದೇ ಅನುಷ್ಠಾನ. ಆ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಶಿವಾಚಾರ್ಯರು ಭಕ್ತರ ಕರ್ಮ ಕಳೆಯಲು ಅನುಷ್ಠಾನ ಕೈಗೊಂಡಿರುವುದು ಶ್ಲಾಘನೀಯ ಎಂದರು.

ಶ್ರೀಮಠದಲ್ಲಿ ಬೆಳಗ್ಗೆ ರುದ್ರ ಹೋಮ ಜರುಗಿತು. ಬಳಿಕ ಭಕ್ತರು ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರ ಪಾದಪೂಜೆ ನೆರವೇರಿಸಿದರು.

ತಂಗಡಪಲ್ಲಿಯ ಶ್ರೀ ಶಿವಯೋಗಿ ಶಿವಾಚಾರ್ಯರು, ಪ್ರಮುಖರಾದ ಹಿರಣ್ಯಪ್ಪ ದೇಸಾಯಿ, ಚಂದ್ರಶೇಖರ ಸಂಪಾ, ವೀರಣ್ಣ ಸಜ್ಜನಶೆಟ್ಟಿ, ರಾಜಶೇಖರ ಪುರಾಣಿಕ, ಗುರಣಪ್ಪ ತಳಕಿನ, ಅಶೋಕ ಇಸಫ್, ಗಣಪತಿ ತಳಕಿನ, ಪ್ರಭುಲಿಂಗಯ್ಯ ಭಂಗಿಮಠ, ಸಂದೀಪ ತೇಗಲತಿಪ್ಪಿ, ಸಿದ್ದಯ್ಯ ಹಿರೇಮಠ, ರಾಜಶೇಖರ ಏರಿ, ಉದಯ ತಳಕಿನ, ಶಿವಯೋಗಿ ಭಂಗಿಮಠ, ರವಿ ತೇಗಲತಿಪ್ಪಿ, ಮುನ್ನಯ್ಯ ಸ್ವಾಮಿ, ರಾಜು ತಳಕಿನ, ಸಿದ್ದು ಸಂಪಾ ಇತರರಿದ್ದರು.