ಜಿಲ್ಲೆ

ಗುರುವಾರ ಬರಬೇಕಿದ್ದ ಪೊಲೀಸರು ಶುಕ್ರವಾರ ನಸುಕಿಗೆ ಬಂದರು

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿತರ ಪೈಕಿ ಒಬ್ಬನಾದ ರಘು ಅಲಿಯಾಸ್ ರಾಘವೇಂದ್ರನನ್ನು ಬೆಂಗ ಳೂರು ಪೊಲೀಸರು ದುರ್ಗಕ್ಕೆ ಶುಕ್ರವಾರ ಬೆಳಗಿನ ಜಾವ ಕರೆ ತಂದು ಸ್ಥಳ ಮಹಜರು ನಡೆಸಿದರು.
ನಗರದ ಚಳ್ಳಕೆರೆ ಗೇಟ್ ಬಾಲಾಜಿ ರೆಸ್ಟೋರೆಂಟ್ ಬಳಿಗೆ ಕರೆ ತಂದಂಥ ಸಂದರ್ಭದಲ್ಲಿ,ರೇಣುಕ ಸ್ವಾಮಿಯನ್ನು ರೆಸ್ಟೋರೆಂಟ್ ಸಮೀಪದಿಂದ ಆಟೋದಲ್ಲಿ ಕರೆದುಕೊಂಡು ನಗರದ ಹೊರವಲಯ ಕುಂಚಿಗನಾಳ್ ಪೆಟ್ರೋಲ್‌ಬಂಕ್ ಬಳಿ ಸಿದ್ಧವಾಗಿದ್ದ ಕಾರಲ್ಲಿ ಕೂರಿಸಿಕೊಂಡು ಬೆಂಗಳೂರಿಗೆ ತೆರಳಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಈ ಎರಡು ಸ್ಥಳಗಳ ಪಂಚನಾಮೆ ನಡೆಸಿದರು.
ಖಾಸಗಿ ಇನ್ನೋವಾ ಹಾಗೂ ಇಂಡಿಕಾ ಕಾರುಗಳಲ್ಲಿ ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್‌ಸಂಜೀವಗೌಡ ಮತ್ತು ನಾಲ್ವರು ಸಿಬ್ಬಂದಿ ಇದ್ದ ತಂಡ ರಘುವನ್ನು ದುರ್ಗಕ್ಕೆ ಕರೆದುಕೊಂಡು ಬಂದಿತ್ತು. ಬೆಳಗ್ಗೆ ಜಾವ 1.20ರ ಹೊತ್ತಿಗೆ ಬಂದ ತಂಡ,ಮಹಜರು ಹೆಚ್ಚುಕಡಿಮೆ ಅರ್ಧ ತಾಸಿ ನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿತು.
ಮತ್ತೊಬ್ಬ ಆರೋಪಿ ವಶಕ್ಕೆ
ಬಳಿಕ ದುರ್ಗದಲ್ಲಿಗುರುವಾರ ಸಂಜೆ ಶರಣಾಗಿದ್ದ ಮತ್ತೊಬ್ಬ ಆರೋಪಿ ರವಿಶಂಕರನನ್ನು ದುರ್ಗದ ಪೊಲೀಸರಿಂದ ತಮ್ಮ ವಶಕ್ಕೆ ಪಡೆದು ಆತನನ್ನೂ ಬೆಂಗಳೂರಿಗೆ ಕರೆದೊಯ್ಯಯಿತು.
ಗುರುವಾರ ಬೆಳಗ್ಗೆಯಿಂದಲೇ ಆರೋಪಿಯನ್ನು ದುರ್ಗಕ್ಕೆ ಸ್ಥಳ ಮಹಜರಿಗಾಗಿ ಕರೆ ತರುತ್ತಾರೆ ಎಂದು ಕಾದಿದ್ದ ಪೊಲೀಸರು ಹಾಗೂ ಜನರು
ಬೆಂಗಳೂರು ಪೊಲೀಸರ ನಡೆಯಿಂದ ಬೆಸ್ತು ಬಿದ್ದರು. ಪೊಲೀಸರು ದರ್ಶನ್ ಬರುವುದಿಲ್ಲ, ಯಾವುದೇ ಕಾರ‌್ಯಕ್ರಮ ಇಲ್ಲ, ದಯವಿಟ್ಟು ಮನೆಗಳಿಗೆ ತೆರಳಿ ಎಂದು ಮನವಿಗೂ ಜಗ್ಗದ ಜನರು, ಯಾವಾಗ ಆರೋಪಿಯನ್ನು ಕರೆ ತರಲಿಲ್ಲವೋ ಆಗ ನಿಧಾನವಾಗಿ ಮನೆಗಳಿಗೆ ಹಿಂತಿರು ತೊಡಗಿದರು.
ತನಿಖಾಧಿಕಾರಿಗೆ ಆರೋಪಿ ವಿವರಣೆ
ಬಾರ್ ಬಳಿ ಹಾಗೂ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ ಮಹಜರು ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ ಪೆಟ್ರೋಲ್ ಬಂಕ್ ಬಳಿ ಪಕ್ಷದಲ್ಲಿದ್ದ ಖಾಲಿ ನಿವೇಶನದ ಬಳಿ ಆರೋಪಿ ತನಿಖಾಧಿಕಾರಿ ಮಾಹಿತಿ ನೀಡಿದ.
ಠಾಣಾ ಆವರಣದಲ್ಲಿ ಜಮಾಯಿಸಿದ್ದ ಪೊಲೀಸರು
ಆರೋಪಿಯೊಂದಿಗೆ ಬಂದಿದ್ದ ಬೆಂಗಳೂರು ಪೊಲೀಸ್ ತಂಡಕ್ಕೆ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ ಎಂಬ ಮಾಹಿತಿ ರವಾ ನೆ ಆಗಿತ್ತು. ಈ ಹಿನ್ನೆಲೆಯಲ್ಲಿ ದುರ್ಗ ಜಿಲ್ಲೆ ಪ್ರವೇಶಿಸಿದರೂ,ಕೆಲವು ಸಮಯಗಳ ತಾವಿದ್ದ ಸ್ಥಳವನ್ನು ತಂಡ ರಹಸ್ಯವಾಗಿರಿಸಿತ್ತು. ರಾತ್ರಿ 11ರ ಹೊತ್ತಿಗೆ ಮತ್ತೊಮ್ಮೆ ಸ್ಥಳೀಯ ಪೊಲೀಸರಿಗೆ ಬಂದ ಮಾಹಿತಿಯಿಂದಾಗಿ ನಗರ ಠಾಣಾ ಆವರಣದಲ್ಲಿ ಜಮಾಯಿಸಿದ ಅಧಿಕಾರಿ, ಪೊಲೀಸರು, ತಂಡದಿಂದ ಇನ್ನು 30 ನಿಮಿಷ ದೊಳಗೆ ಸ್ಥಳಕ್ಕೆ ಬರುತ್ತವೇ ಎಂದು ಮತ್ತೊಮ್ಮೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿ ಬಂದೋಬಸ್ತ್ ಕಾರ‌್ಯದಲ್ಲಿ ನಿರತವಾಯಿತು.
ಕೊಲೆ ಪ್ರ ಕರಣದ ತನಿಖಾಧಿಕಾರಿ ಬದಲಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿಂದ ಗುರುವಾರ ಸಂಜೆ 4.30ರ ಸಮಯಕ್ಕೆ ತಂಡ ಹೊರಟಿದೆ ಎಂಬ ಮಾಹಿತಿ ಲಭ್ಯವಾಗಿದ್ದರೂ ತಂಡ ಬಂದಿದ್ದ ಮಾತ್ರ ಶುಕ್ರವಾರ ನಸುಕಿಗೆ.