ಜಿಲ್ಲೆ

ಗುರುಬಸು ಅಧ್ಯಕ್ಷ, ಸಂಜಯ ಉಪಾಧ್ಯಕ್ಷ

ವಿದ್ಯಾ ಶೆಟ್ಟನಗೌಡ್ರ

ಅಥಣಿ: ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಆರೂಢಜ್ಯೋತಿ ಪಟ್ಟಣ ಸಹಕಾರಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಗುರುಬಸು ತೆವರಮನಿ ಹಾಗೂ ಉಪಾಧ್ಯಕ್ಷರಾಗಿ ಸಂಜಯ ನಾಯಿಕ ಅವರು ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿನ ಆರೂಢಜ್ಯೋತಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ ಭಾನುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಆರ್.ಎನ್.ನೂಲಿ ಮತ್ತು ಸಹಾಯಕಿ ಆಶಾ ಬಿರಾದಾರ ಘೋಷಿಸಿದರು.

ಅಧ್ಯಕ್ಷ ಗುರುಬಸು ತೆವರಮನಿ ಮಾತನಾಡಿ, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಸಹಕಾರದಿಂದ ಬ್ಯಾಂಕ್ ಪ್ರಗತಿಗೆ ಶ್ರಮಿಸಲಾಗುವುದು. ಶಾಸಕ ಸವದಿ ಮಾರ್ಗದರ್ಶನದಲ್ಲಿ ಆರೂಢಜ್ಯೋತಿ ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿ ಬ್ಯಾಂಕ್‌ನ್ನು ಆರ್ಥಿಕವಾಗಿ ಬೆಳೆಸಿ, ಜನರಿಗೆ ಆರ್ಥಿಕ ನೆರವು ನೀಡುವಂತೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಆಡಳಿತ ಮಂಡಳಿ ನಿರ್ದೇಶಕರಾದ ರಾಮಗೌಡ ಗುಮತಾಜ, ಅಶೋಕ ನಾಯಿಕ, ಸತೀಶ ಶೇಡಶ್ಯಾಳ, ಯಂಕಪ್ಪ ಖೋತ, ಮಹಾದೇವ ಕುಳಲಿ, ಪ್ರಭಾಕರ ಹಂಜಿ, ಅಭಿಜಿತ್ ಮೆನಸಿ, ತಮ್ಮಣ್ಣ ರಭಕವಿ, ಸುನೀಲ ನಾಯಿಕ, ಗೀತಾ ಸಂಕ್ರಟ್ಟಿ, ಶಾರದಾ ಪಾಟೀಲ, ಇಂದಿರಾ ಡಾಲೆ, ಶಿದರಾಯ ನಾಯಿಕ, ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಸಿದ್ದು ಶಿರಗೂರ, ಬಿ.ಕೆ.ಇಟ್ನಾಳ, ಭೀಮಾಶಂಕರ ಶಿರಗೂರ, ಎಂ.ಬಿ.ಶೆಟ್ಟಿ, ಬಿ.ಎ.ಪಾಟೀಲ, ಈರಣ್ಣ ಅಡಗಲ್ಲ, ಸಿದ್ದಲಿಂಗ ಗುಡೋಡಗಿ ಇತರರಿದ್ದರು.