ಬಾಗಲಕೋಟೆ: ಬಾಗಲಕೋಟೆ ನಗರದ ಪ್ರತಿಷ್ಠಿತ ಶ್ರೀ ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘಕ್ಕೆ ಆರ್ಥಿಕ ವರ್ಷದ ಅಂತ್ಯಕ್ಕೆ ೧.೮೫ ಕೋಟಿ ರೂ.ಗಳ ನಿವ್ಹಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಡಾ. ವೀರ಼ಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಶೇ.೧೫ ರಷ್ಟು ಲಾಭಾಂಶವನ್ನು ಸದಸ್ಯರಿಗೆ ವಿತರಿಸಲಾಗುವುದು. ೨೦೦೧ ರಲ್ಲಿ ಒಂದು ಸಾವಿರ ಜನ ಸದಸ್ಯರು, ೨೦ ಲಕ್ಷ ರೂ.ಗಳ ಶೇರು ಬಂಡವಾಳದೊಂದಿಗೆ ಆರಂಭವಾದ ಸಂಘವು ವಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದರು.
೨೦೦೨ ರಲ್ಲಿ ೧೯೯೩ ಇದ್ದ ಸದಸ್ಯರು ಈಗ ೭೧೪.೭, ೪೪.೬೮ ಲಕ್ಷ ರೂ.ಗಳ ಇದ್ದ ಶೇರು ಬಂಡವಾಳ ಈಗ ೩೭೭.೫೯ ಲಕ್ಷ ರೂ., ೧.೬೫ ಲಕ್ಷ ಇದ್ದ ನಿಽಗಳು ಈಗ ೨.೮೧೭.೪೨ ಲಕ್ಷ ರೂ., ೯೭೭.೭೭ ಲಕ್ಷ ರೂ.ಠೇವುಗಳು ಈಗ ೨೯.೦೪೬.೧೮ ಲಕ್ಷ ರೂ., ೬೩೦ ಲಕ್ಷ ಗುಂತಾವಣೆಗಳು ಈಗ ೧೭.೩೪೯.೨೭ ಲಕ್ಷ ರೂ., ೩೬೩.೩೩ ಲಕ್ಷ ರೂ.ಸಾಲಗಳು ಈಗ ೧೩.೬೦೦.೧೪ ಲಕ್ಷ ರೂ., ೧೦೨೪.೪೧ ಲಕ್ಷ ರೂ.ದುಡಿಯುವ ಬಂಡವಾಳ ಈಗ ೩೨.೨೪೧.೨೧ ಲಕ್ಷ ರೂ. ಇದೆ. ಆರಂಭದಲ್ಲಿ ೧೩.೪೪ ಲಕ್ಷ ರೂ. ಲಾಭ ಇದ್ದ ಸಂಘವು ೩೧-೩-೨೦೨೪ ರ ಆರ್ಥಿಕ ವರ್ಷದ ಅಂತ್ಯಕ್ಕೆ ೧.೮೫ ಕೋಟಿ. ರೂ.ಗಳ ಲಾಭ ಗಳಿಸಿದೆ ಎಂದು ಹೇಳಿದರು.
ಜಿಲ್ಲೆಯ ಉದ್ಯಮಿದಾರರಿಗೆ, ವ್ಯಾಪಾರಸ್ಥರಿಗೆ, ನೌಕರದಾರರಿಗೆ, ಕೂಲಿಕಾರ್ಮಿಕರಿಗೆ, ಅಲ್ಲದೇ ಇನ್ನುಳಿದ ಸದಸ್ಯರಿಗೂ ಅವರವರ ಆರ್ಥಿಕ ಅವಶ್ಯಕತೆಗಳಿಗೆ ಅನುಸಾರವಾಗಿ ಆರ್ಥಿಕ ನೆರವನ್ನು ಸಂಘವು ಒದಗಿಸಿದೆ. ಅವರ ಆರ್ಥಿಕ ಅಭಿವೃದ್ಧಿಗೆ ಸಂಘವು ನೆರವಾಗಿದೆ. ಬಿ.ಇ. ಕಾಲೇಜು ಶಾಖೆ, ಎ.ಪಿ.ಎಮ್.ಸಿ. ಶಾಖೆ, ಅಡತ ಬಜಾರ ಶಾಖೆ, ಮುಧೋಳ ಶಾಖೆ ಅಮೀನಗಡ ಶಾಖೆ, ಹಾಗೂ ಕಮತಗಿ ಶಾಖೆ ಈ ಆರು ಶಾಖೆಗಳು, ಹಾಗೂ ಕೇಂದ್ರ ಕಚೇರಿ ನವನಗರದಲ್ಲಿದ್ದು ಸ್ಥಳೀಯಯ ಸದಸ್ಯರುಗಳಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ, ಠೇವುದಾರರಿಗೆ, ಆರ್ಥಿಕ ಸೌಲಭ್ಯತೆಗಳನ್ನು ಒದಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಹೊಸ ಶಾಖೆ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಪ್ರಸಕ್ತ ವರ್ಷ ಶೇ.೧೫ ಡಿವ್ಹೀಡೆಂಟ್ ಹಂಚಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಮುರಿಗೆಪ್ಪ ನಾರಾ, ನಿರ್ದೇಶಕರಾದ ಅಶೋಕ ಸಜ್ಜನ, ಪ್ರಭಯ್ಯಾ ಸರಗಣಾಚಾರಿ, ಗುರುಬಸವ ಸೂಳಿಭಾವಿ, ಲಕ್ಷ್ಮೀ ನಾರಾಯಣ ಕಾಸಟ್, ದಾಮೋದರ ರಾಠಿ, ಜಯಪ್ರಕಾಶ ಯಂಡಿಗೇರಿ, ಮುಖ್ಯ ವ್ಯವಸ್ಥಾಪಕ ಎಂ.ಎಚ್. ಹಿರೇಮಠ ಉಪಸ್ಥಿತರಿದ್ದರು.