ವಿಜಯಪುರ : ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸುವ ಜ್ಞಾನದ ಬೆಳಕನ್ನು ಹೊತ್ತಿಸುವ ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗಲೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಪ್ರಾಚಾರ್ಯ ಗುರುಪ್ರಸಾದ ಯರಗಟ್ಟಿಮಠ ಹೇಳಿದರು.
ನಗರದ ಆಕ್ಸಫರ್ಡ್ ಐಐಟಿ ಒಲಿಂಪಿಯಾಡ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಆಡಳಿತಾಧಿಕಾರಿ ಪ್ರವಿಣ ಲಿಂಗದಳ್ಳಿ ಮತ್ತಿತರರಿದ್ದರು.